Mysore
28
scattered clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಮೈಸೂರಿನ ಸರ್ಕಾರಿ ಆಸ್ಪತ್ರೆಯ ವೈದ್ಯೆಯನ್ನು ಅಮಾನತುಗೊಳಿಸಿದ ರಾಜ್ಯ ಸರ್ಕಾರ

ಮೈಸೂರು : ರೋಗಿಗಳ ಬಳಿ ಲಂಚ ವಸೂಲಿ ಮಾಡುತ್ತಿದ್ದ ಸರ್ಕಾರಿ ವೈದ್ಯೆ ಡಾ. ಕೋಮಲಾ ಅವರನ್ನು ರಾಜ್ಯ ಸರ್ಕಾರ ಅಮಾನತುಗೊಳಿಸಿ ಆದೇಶ ಹೊರಡಿಸಿದೆ

ನಗರದ ಉದಯಗಿರಿಯಲ್ಲಿರುವ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೋಮಲಾ,ಪ್ರತಿ ಸೇವೆಗೆ ಇಂತಿಷ್ಟು ಅಂತ ಆರೋಗ್ಯ ಕೇಂದ್ರದ ಸಿಬ್ಬಂದಿಯ ಮೂಲಕವೇ ಸಾರ್ವಜನಿಕರಿಂದ ಲಂಚ ವಸೂಲಿ ಮಾಡಿ, ದಿನಾಂತ್ಯದ ಹೊತ್ತಿಗೆ ಎಷ್ಟು ಕಲೆಕ್ಷನ್ ಆಗಿತ್ತೋ ಹಣದಲ್ಲಿ ಆರೋಗ್ಯ ಕೇಂದ್ರದ ಒಬ್ಬೊಬ್ಬರಿಗೆ ಇಂತಿಷ್ಟು ಅಂತ ಹಂಚುತ್ತಿದ್ದರು, ಆನಂತರ ತನ್ನ ಷೇರನ್ನು ಬ್ಯಾಗಿಗೆ ಹಾಕಿಕೊಂಡು ಮನೆಯತ್ತ ಹೆಜ್ಜೆ ಹಾಕುತ್ತಿದ್ದರು ಎಂಬ ಆರೋಪಗಳು ಕೇಳಿಬಂದಿದ್ದವು.

ಆರೋಗ್ಯ ಕೇಂದ್ರದ ಸಿಬ್ಬಂದಿಯೊಬ್ಬರು ಕೋಮಲಾ ಅವರು ಸಂಜೆ ಮನೆಗೆ ತೆರಳುವ ಮುನ್ನ ಲಂಚದ ಹಣವನ್ನು ಸಿಬ್ಬಂದಿಗೆ ಹಂಚುತ್ತಿದ್ದ ವಿಡಿಯೋವೊಂದನ್ನು ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದರು. ಆ ವಿಡಿಯೋ ವೈರಲ್ ಆಗಿತ್ತು. ಅದನ್ನು ಆಧರಿಸಿ, ನಾನಾ ಮಾಧ್ಯಮಗಳು ವೈದ್ಯ ಕರ್ಮಕಾಂಡದ ಬಗ್ಗೆ ವಿಸ್ತ್ರೃತ ವರದಿಗಳನ್ನು ಮಾಡಿದ್ದವು. ಆ ಎಲ್ಲಾ ವರದಿಗಳನ್ನು ಗಮನಿಸಿದ ಆರೋಗ್ಯ ಇಲಾಖೆ, ಜು. 4ರಂದು ಮಧ್ಯಾಹ್ನದ ಹೊತ್ತಿಗೆ ಅಮಾನತು ಆದೇಶವನ್ನು ಹೊರಡಿಸಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ