ಮೈಸೂರು: ಪ್ರತ್ಯೇಕ ಮೂರು ಸ್ಥಳಗಳಲ್ಲಿ ನಡೆಯುತ್ತಿದ್ದ ಜೂಜು ಅಡ್ಡೆ ಮೇಲೆ ದಾಳಿ ನಡೆಸಿರುವ ದಕ್ಷಿಣ ಗ್ರಾಮಾಂತರ ಹಾಗೂ ಇಲವಾಲ ಪೊಲಿಸರು ಒಟ್ಟು 34 ಮಂದಿಯನ್ನು ಬಂಧಿಸಿ 1.55 ಲಕ್ಷ ರೂ. ನಗದು ಹಾಗೂ 6 ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ.
ಮೊದಲ ಪ್ರಕರಣದಲ್ಲಿ ಕೊಪ್ಪಲೂರು ಗ್ರಾಮದ ಸಿದ್ದಲಿಂಗೇಶ್ವರ ಬಡಾವಣೆ ಬಳಿಯ ಖಾಲಿ ನಿವೇಶನದಲ್ಲಿ ಜೂಜಾಟ ನಡೆಯುತ್ತಿದೆ ಎಂಬ ಮಾಹಿತಿ ವರುಣ ಠಾಣಾ ಪೊಲಿಸರಿಗೆ ಬಂದಿದೆ. ಕೂಡಲೇ ಪೊಲೀಸರ ತಂಡ ಸ್ಥಳಕ್ಕೆ ತೆರಳಿ ದಾಳಿ ನಡಸಿದ ಈ ವೇಳೆ ಜೂಜಾಟದಲ್ಲಿ ತೊಡಗಿದ್ದ 14 ಮಂದಿಯನ್ನು ಬಂಧಿಸಿದ ಪೊಲೀಸರು, ಪಣಕ್ಕಿಟ್ಟಿದ್ದ 17,130 ರೂ. ಹಣವನ್ನು ವಶಕ್ಕೆ ಪಡೆದಿದ್ದಾರೆ.
ಎರಡನೇ ಪ್ರಕರಣದಲ್ಲಿ ಗೆಜ್ಜಗಳ್ಳಿಯ ನಂಜಪ್ಪ ಎಂಬವರ ಮನೆಯ ಮುಂಭಾಗ ಜೂಜಾಟ ನಡೆಯುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಬಂದಿದೆ. ಕೂಡಲೇ ಸ್ಥಳಕ್ಕೆ ತೆರಳಿದ ಪೊಲೀಸರ ತಂಡ ದಾಳಿ ನಡೆಸಿದೆ. ಈ ವೇಳೆ ಜೂಜಾಟದಲ್ಲಿ ಭಾಗಿಯಾಗಿದ್ದ 13 ಮಂದಿಯನ್ನು ಪೊಲೀಸರು ಬಂಽಸಿದ್ದು, 87,050 ರೂ. ನಗದನ್ನು ವಶಕ್ಕೆ ಪಡೆದಿದ್ದಾರೆ. ಎರಡೂ ಪ್ರಕರಣಗಳು ದಕ್ಷಿಣ ಗ್ರಾಮಾಂತರ ಪೊಲಿಸ್ ಠಾಣೆಯಲ್ಲಿ ದಾಖಲಾಗಿವೆ.
ಮೂರನೇ ಪ್ರಕರಣದಲ್ಲಿ ಇಲವಾಲ ಬಳಿಯ ಕೆಆರ್‌ಎಸ್ ಬೈ ಪಾಸ್ ರಸ್ತೆಯ ಬಳಿ ಜೂಜಾಟ ನಡೆಯುತ್ತಿದೆ ಎಂಬ ಮಾಹಿತಿ ಇಲವಾಲ ಪೊಲೀಸರಿಗೆ ಬಂದಿದೆ. ಕೂಡಲೇ ಸ್ಥಳಕ್ಕೆ ತೆರಳಿದ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಜೂಜಾಟದಲ್ಲಿ ತೊಡಗದ್ದ 7 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಪಣಕ್ಕಿಟ್ಟದ್ದ 51,140 ರೂ. ನಗದು ಹಾಗೂ 6 ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂದ ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





