ಮೈಸೂರು: ಜಿಲ್ಲೆಯ ಮದಾಪುರ ಬಳಿ ದನದ ಕೊಟ್ಟಿಗೆಯಲ್ಲಿ ಖೋಟಾ ನೋಟು ಪ್ರಿಂಟ್ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು, ಕೃತ್ಯದಲ್ಲಿ ತೊಡಗಿದ್ದ ತಂದೆ ಮಗನನು ಬಂಧಿಸಿರುವ ಘಟನೆ ಟಿ.ನರಸೀಪುರ ತಾಲ್ಲೂಕಿನ ಹಿರಿಯೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಾಗೇಶ್(25), ಶಿವಪ್ರಸಾದ್(48)ಬಂಧಿತ ಆರೋಪಿಗಳು. ಖಚಿತ ಮಾಹಿತಿ ಮೇರೆಗೆ ಟಿ.ನರಸೀಪುರ ಪೊಲೀಶರು ದಾಳಿ ಮಾಡಿದ್ದು, ಈ ವೇಳೆ ಆರೋಪಿಗಳು ತಾವು ಮಲುಗಲು ಹಾಸಿಗೆ ಹಾಸಿಕೊಂಡಿದ್ದ ಪಕ್ಕದ ರಟ್ಟಿನ ಬಾಕ್ಸನಲ್ಲಿ ಎಪ್ಸಲ್ ಕಲರ ಪ್ರಿಂಟರ್ ಕಂಡುಬಂದಿದೆ. ಈ ವೇಳೆ ಅನುಮಾನಗೊಂಡು ಇನ್ನಷ್ಟು ಪರಿಶೀಲನೆ ನಡೆಸಿದಾಗ ಕೃತ್ಯಕ್ಕೆ ಬಳಸುತ್ತಿದ್ದ ಎಲ್ಲ ವಸ್ತುಗಳನ್ನು ಪತೆಹಚ್ಚಲಾಗಿದೆ ಎಂದು ಪೊಲೀರು ತಿಳಿಸಿದ್ದಾರೆ.





