Mysore
24
scattered clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ಮೈಸೂರು: ಕೆ.ವಿ ವಿದ್ಯುತ್ ಉಪ-ಕೇಂದ್ರ ಸ್ಥಾಪನೆ; ಭೂ ಖರೀದಿಗೆ ಮುಂದಾದ ಸರ್ಕಾರ

ಮೈಸೂರು: ಮೈಸೂರಿನ ಚಾಮರಾಜನಗರ ಬೃಹತ್ ಕಾಮಗಾರಿ ವಿಭಾಗ ವ್ಯಾಪ್ತಿಯ ಹೆಚ್.ಡಿ ಕೋಟೆ ತಾಲ್ಲೂಕಿನ ಎಲಮತ್ತೂರು ಗ್ರಾಮದ ಸ್ಥಳದಲ್ಲಿ ಕೆ.ವಿ ವಿದ್ಯುತ್ ಉಪ-ಕೇಂದ್ರವನ್ನು ಸ್ಥಾಪಿಸಲು ಸರ್ಕಾರ  ಉದ್ದೇಶಿಸಿದೆ.

ಕನಿಷ್ಠ 2 ಎಕರೆ ಜಮೀನು ಮುಖ್ಯ ರಸ್ತೆಗೆ ಹೊಂದಿಕೊoಡoತೆ ಹಾಗೂ ಗ್ರಾಮದ ವ್ಯಾಪ್ತಿಯ ಅಥವಾ ಸುತ್ತಮುತ್ತ ಇರುವ ಜಮೀನನ್ನು ಭೂ ಮಾಲೀಕರುಗಳಿಂದ ನೇರವಾಗಿ ಸರ್ಕಾರವು ನಿಗದಿಪಡಿಸುವ ಬೆಲೆಯಲ್ಲಿ ಖರೀದಿ ಮಾಡಲು ಉದ್ದೇಶಿಸಲಾಗಿದೆ.

ಜಮೀನನ್ನು ಕ.ವಿ.ಪ್ರ.ನಿ.ನಿಗೆ ಮಾರಾಟ ಮಾಡಲು ಇಚ್ಚಿಸುವ ಭೂಮಾಲೀಕರು ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಯ ಪ್ರೀತಮ್ ಎಂ.ಎo ಅವರ ದೂ.ಸಂ:9448271524, ಕಾರ್ಯನಿರ್ವಾಹಕ ಇಂಜಿನಿಯರ್(ಕಾ) ರಾಜೇಶ್ ಅವರ ದೂ.ಸಂ:9448012526, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ) ಅಜಯ್ ಅವರ ದೂ.ಸಂ:9448391252, ಹಾಗೂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ) ಕಿರಣ್ ಅವರ ದೂ.ಸಂ:9480813912 ನ್ನು ಸಂಪರ್ಕಿಸಬಹುದು ಎಂದು ಚಾಮರಾಜನಗರದ ಬೃಹತ್ ಕಾಮಗಾರಿ ವಿಭಾಗದ ಕವಿಪ್ರನಿನಿ ಯ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags: