Mysore
21
haze

Social Media

ಬುಧವಾರ, 28 ಜನವರಿ 2026
Light
Dark

ಮೈಸೂರು | ಮಾದಕ ವಸ್ತು ಎಂಡಿಎಂಎ ತಯಾರಿಕಾ ಘಟಕ ಜಾಲ ಪತ್ತೆ ಹಚ್ಚಿದ ಪೊಲೀಸರು

ಮೈಸೂರು : ನಗರದ ಹೊರವಲಯದಲ್ಲಿ ಕಾರ್ಯಾಚರಿಸುತ್ತಿದ್ದ ಎಂಡಿಎಂಎ ತಯಾರಿಕಾ ಘಟಕಕ್ಕೆ ಮಹಾರಾಷ್ಟ್ರ ಪೊಲೀಸರು ಶನಿವಾರ ರಾತ್ರಿ ದಾಳಿ ನಡೆಸಿ, ಎಂಡಿಎಂಎ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

‘ಆರೋಪಿಯೊಬ್ಬ ನೀಡಿದ ಮಾಹಿತಿ ಆಧರಿಸಿ ಮಹಾರಾಷ್ಟ್ರ ಪೊಲೀಸರು ನಗರಕ್ಕೆ ಬಂದಿದ್ದು, ಸ್ಥಳೀಯ ಪೊಲೀಸರ ಸಹಾಯದಿಂದ ಮಾದಕ ವಸ್ತು ತಯಾರಿಕಾ ಘಟಕಕ್ಕೆ ದಾಳಿ ನಡೆಸಿದ್ದಾರೆ. ಈ ವೇಳೆ ದ್ರವ ರೂಪದ ವಸ್ತು ಪತ್ತೆಯಾಗಿದೆ. ಇಲ್ಲಿಂದಲೇ ಹೊರರಾಜ್ಯ ಹಾಗೂ ವಿದೇಶಗಳಿಗೆ ಮಾದಕ ವಸ್ತು ಕಳುಹಿಸುತ್ತಿದ್ದರು’ ಎಂದು ಮೂಲಗಳು ತಿಳಿಸಿವೆ. ತಯಾರಿಕಾ ಘಟಕ ಇರುವ ಸ್ಥಳ ಹಾಗೂ ವಶಪಡಿಸಿಕೊಂಡ ಪ್ರಮಾಣದ ಕುರಿತು ಸ್ಥಳೀಯ ಪೊಲೀಸರು ಸ್ಪಷ್ಟಪಡಿಸಿಲ್ಲ.

Tags:
error: Content is protected !!