Mysore
24
scattered clouds

Social Media

ಶುಕ್ರವಾರ, 26 ಡಿಸೆಂಬರ್ 2025
Light
Dark

ಮೈಸೂರು | ಧಮ್ಮದೀಪ ; ಧಮ್ಮೋಪದೇಶ ನೀಡಿದ ಭಂತೆ ಕಲ್ಯಾಣಸಿರಿ

ಮೈಸೂರು: ಇಲವಾಲದ ಸಮೃದ್ಧಿ ಬಡಾವಣೆಯಲ್ಲಿ ಬೌದ್ಧ ಉಪಾಸಕರಾದ ಕೆ.ಎಂ.ವಿನೋದ ಮತ್ತು ಎಚ್.ಸಿ.ರಾಜೇಶ್ ಅವರ ನಿವೇಶನದಲ್ಲಿ ಧಮ್ಮದೀಪ ಕಾರ್ಯಕ್ರಮವನ್ನು ಭಾನುವಾರ ಹಮ್ಮಿಕೊಳ್ಳಲಾಗಿತ್ತು.

ಅಶೋಕಪುರಂನ ಬೌದ್ಧವಿಹಾರದ ಭಂತೆ ಡಾ.ಕಲ್ಯಾಣಸಿರಿ ಅವರ ಸಾನಿಧ್ಯದಲ್ಲಿ ಬುದ್ಧವಂದನೆಯೊಂದಿಗೆ ಧಮ್ಮೋಪದೇಶ ನಡೆಯಿತು.

ಬಳಿಕ ಮಾತನಾಡಿದವ ಭಂತೇಜಿ ಕಲ್ಯಾಣಿಸಿರಿ ಅವರು, ಬುದ್ಧತತ್ವ ಮಾನವತ್ವದ ಪ್ರತಿರೂಪವಾಗಿದ್ದು ಲೋಕದ ಜೀವರಾಶಿಗಳ ಹಿತ ಮತ್ತು ಸುಖಕ್ಕಾಗಿ ಹಾತೊರೆಯುತ್ತದೆ. ಜಾತಿಕೊಳಕುಗಳಿಂದ ಮತಿಗೆಟ್ಟ ಸಮಾಜದಲ್ಲಿ ಜೀವಜೀವಗಳ ನಡುವೆ ಸಮತೆ, ಮಮತೆಯ ಸಂಪ್ರೀತಿ ಹರಿಸಿ ಸರ್ವರೂ ಸಾಮರಸ್ಯದಿಂದ ಬದುಕುವ ನೈತಿಕ ಸಂಸ್ಕಾರವನ್ನು ಕಲಿಸುತ್ತದೆ ಎಂದು ಹೇಳಿದರು.

ಕಣ್ಣಿಗೆ ಕಾಣದ ಸ್ವರ್ಗ-ನರಕಗಳ ಚಿಂತೆಯಲ್ಲಿ ಮೌಡ್ಯಾಲೋಚನೆಗಳಿಗೆ ತುತ್ತಾಗಿರುವ ಮಾನವನಿಗೆ ತಮ್ಮ ನಡತೆಯಿಂದ ಸನ್ಮಾರ್ಗವನ್ನೂ ಸಾಧಿಸಬಹುದು ಎಂದು ಬುದ್ಧರು ತೋರಿಸಿದ್ದಾರೆ. ಹೀಗಾಗಿ ಪಂಚಶೀಲ, ಅಷ್ಟಾಂಗಮಾರ್ಗ ಮತ್ತು ದಶಪಾರಮಿಗಳನ್ನು ಅನುಸರಿಸುವುದರ ಮುಲಕ ಭೂವಾಸಿಗಳಾದ ನಾವು ಇಲ್ಲಿಯೇ ಈ ಜೀವನದಲ್ಲಿಯೇ ಸ್ವರ್ಗಸುಖವನ್ನು ಅನುಭವಿಸಬಹುದಾಗಿದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಕಾಳಮ್ಮ, ಪಾರ್ವತಮ್ಮ, ಚಿಕ್ಕದಾಸಯ್ಯ, ಮಾಯಣ್ಣ, ಎಚ್.ಆರ್.ಯಶಿಕ, ಎಚ್.ಆರ್.ಪ್ರಬುದ್ಧ ಸಾತ್ವಿಕ್, ಗೋವಿಂದರಾಜ್, ರಮೇಶ್, ಕೆ.ಲೋಕೇಶ್, ನಟೇಶ್, ಲೇಖಕಿ ಸುಮ ಪಂಚವಳ್ಳಿ, ಎಂ.ಎಸ್.ಮಂಜು, ಪೋಲಿಸ್ ಇಲಾಖೆಯ ವಸಂತಕುಮಾರ್, ಜ್ಯೋತಿಷ್ ಮೂರ್ತಿ, ಸೋಯಬ್ ರಜಾಕ್, ಲೋಕೇಶ್ ಎಂ. ಮೊದಲಾದವರು ಉಪಸ್ಥಿತರಿದ್ದರು.

Tags:
error: Content is protected !!