Mysore
18
overcast clouds

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಮೈಸೂರು | ಅತಿಥಿ ಉಪನ್ಯಾಸಕರ ತಡೆಯಾಜ್ಞೆ ತೆರವಿಗೆ ಒತ್ತಾಯ

ಮೈಸೂರು: ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಅತಿಥಿ ಉಪನ್ಯಾಸಕರ ಹುದ್ದೆಗಳ ನೇಮಕಕ್ಕೆ ಸರ್ಕಾರವೇ ಅಡ್ಡಗಾಲು ಹಾಕುತ್ತಿರುವುದು ಸರಿಯಲ್ಲ. ಕೂಡಲೇ ಈ ಸಂಬಂಧ ನ್ಯಾಯಾಯಲದಲ್ಲಿ ಇರುವ ತಡೆಯಾಜ್ಞೆ ತೆರವಿಗೆ ಸರ್ಕಾರ ಕ್ರಮ ವಹಿಸಬೇಕು ಎಂದು ಯುಜಿಸಿ ಅರ್ಹತೆ ಹೊಂದಿರುವ ನಿರುದ್ಯೋಗಿ ಎಚ್.ಡಿ. ಕೋಟೆ ತಾಲ್ಲೂಕು ಮುಳ್ಳೂರಿನ ಎಂ.ಆರ್. ಮಹೇಶ ಒತ್ತಾಯಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, 2024ರ ಮೇ ನಲ್ಲಿ ಹೈಕೋರ್ಟ್ ಆದೇಶ ಹೊರಡಿಸಿ, ಯುಜಿಸಿ ಅರ್ಹತೆ ಪಡೆದಿರುವವರಿಗೆ ಮಾತ್ರ ಅತಿಥಿ ಉಪನ್ಯಾಸಕ ಹುದ್ದೆ ನೀಡಬೇಕೆಂದು ತಿಳಿಸಿದೆ. ಆದರೆ, ಸರ್ಕಾರ ಈ ಅರ್ಹತೆ ಇಲ್ಲದವರಿಗೂ ಅನುಕೂಲವಾಗಲೆಂಬ ಉದ್ದೇಶದಿಂದ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದೆ. ಜೊತೆಗೆ ವಿದ್ಯಾರ್ಥಿಗಳ ಹಿತದೃಷ್ಟಿ ಎಂಬ ಕಾರಣ ನೀಡಿ ಆ ವೇಳೆಗಾಗಲೇ ಅತಿಥಿ ಉಪನ್ಯಾಸಕರಾಗಿದ್ದವರನ್ನು ತಾತ್ಕಾಲಿಕವಾಗಿ ಮುಂದುವರಿಸಿತು. ಈ ನಡುವೆ ಇನ್ನಿತರ ಬೆಳವಣಿಗೆಗಳೂ ಆಗಿದ್ದು, ಯುಜಿಸಿ ಅರ್ಹತೆ ಹೊಂದಿರುವ ಸುಮಾರು ಐದು ಸಾವಿರ ಮಂದಿ ನೇಮಕಾತಿಗಾಗಿ ಕಾಯ್ದು ಕುಳಿತಿದ್ದಾರೆ. ಹೀಗಾಗಿ ತಡೆಯಾಜ್ಞೆ ತೆರವಿಗೆ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.

ಒಂದು ವೇಳೆ ಯುಜಿಸಿ ಅರ್ಹತೆ ಹೊಂದಿರುವವರನ್ನು ನೇಮಕ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದರೂ ತಾವು ಕೂಲಿ ಕೆಲಸ ಮಾಡಿಕೊಂಡಾದರೂ ಬದುಕುತ್ತೇವೆ. ಆದ್ದರಿಂದ ಸರ್ಕಾರ ಯುಜಿಸಿ ಅರ್ಹತೆ ಹೊಂದಿರುವವರ ನೇಮಕಾತಿಗೆ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದರು.

ಡಾ. ಲಿಂಗರಾಜು, ಎ.ಸಿ. ಚಂದ್ರಶೇಖರ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

 

Tags:
error: Content is protected !!