ಮೈಸೂರು : ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಎಸ್.ಜಾಹ್ನವಿ ವರ್ಗಾವಣೆಯಾಗಿದ್ದು, ಕೊಡಗಿನ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿದ್ದ ಸುಂದರ್ ರಾಜ್ ನೂತನ ಡಿಸಿಪಿಯಾಗಿ ನೇಮಕಗೊಂಡಿದ್ದಾರೆ.
ಸದ್ಯ ಮೈಸೂರಿನ ಡಿಸಿಪಿಯಾಗಿದ್ದ ಎಸ್.ಜಾಹ್ನವಿ ಅವರನ್ನು ಡಿಜಿ ಮತ್ತು ಐಜಿಪಿ ಕಚೇರಿಗೆ ವರ್ಗಾವಣೆ ಮಾಡಿ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ.