ಹುಣಸೂರು: ತಾಲ್ಲೂಕಿನ ಮೂಕನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸ್ವಾಮಿಗೌಡ ಎಂಬುವವರ ಮನೆಯಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.
ಮನೆಯಲ್ಲಿ ಯಾರೂ ಇಲ್ಲದ ವೇಳೆ ಖದೀಮರು, ಲಾಕರ್‌ನಲ್ಲಿಟ್ಟಿದ್ದ 200 ಗ್ರಾಂ ಚಿನ್ನಾಭರಣ 1 ಲಕ್ಷ ರೂ ನಗದನ್ನು ಪರಾರಿಯಾಗಿದ್ದಾರೆ. ಒಂದು ಚೈನ್, 4 ಉಂಗುರ, 2 ಜೊತೆ ಓಲೆ, ಕಡಗ, ಬ್ರಾಸ್ ಲೈಟ್ ಒಂದು ಲಕ್ಷರೂ ನಗದು ಕಳ್ಳತನವಾಗಿದ್ದು, ಘಟನೆ ತಿಳಿಯುತ್ತಿದ್ದಂತೆ ಇಡೀ ಗ್ರಾಮಸ್ಥರೇ ಬೆಚ್ಚಿಬಿದ್ದಿದ್ದಾರೆ.
ಈ ಸಂಬಂಧ ಹುಣಸೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:- ಮಲೆ ಮಹದೇಶ್ವರ ಬೆಟ್ಟದ ಹುಂಡಿಯಲ್ಲಿ 3.26 ಕೋಟಿ ದಾಖಲೆಯ ಮೊತ್ತ ಸಂಗ್ರಹ!





