Mysore
14
overcast clouds

Social Media

ಗುರುವಾರ, 11 ಡಿಸೆಂಬರ್ 2025
Light
Dark

ಮೈಸೂರು: ಶಕ್ತಿ ಪ್ರದರ್ಶನಕ್ಕೆ ʼಕೈʼ ಸಜ್ಜು

ಮೈಸೂರು: ದೋಸ್ತಿ ಪಕ್ಷಗಳ ಪಾದಯಾತ್ರೆಗೆ ಪ್ರತಿಯಾಗಿ ಆಡಳಿತಾರೂಢ ಕಾಂಗ್ರೆಸ್‌ ಶುಕ್ರವಾರ ಇಲ್ಲಿ ಆಯೋಜಿಸಿರುವ ಜನಾಂದೋಲನ ಕಾರ್ಯಕ್ರಮದಲ್ಲಿ ಮೈತ್ರಿ ಪಕ್ಷಗಳ ಅವಧಿಯ ಹಗರಣಗಳನ್ನು ತೆರದಿಡಲು ಮುಂದಾಗಿದೆ.  ಈ ಮೂಲಕ ಸಿಎಂ ಸಿದ್ದರಾಮಯ್ಯ ತಮ್ಮ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಿದ್ದಪಡಿಸಿದ್ದಾರೆ.

ಸಿಎಂ ವಿರುದ್ಧ ಗಂಭೀರ ಆಪಾದನೆ ಹೊರಿಸಿ ಹೋರಾಟದ ಹಾದಿ ಹಿಡಿದಿರುವ ಪ್ರತಿಪಕ್ಷಗಳಿಗೆ ತಿರುಗೇಟು ನೀಡುವುದಕ್ಕೆ ಸಿಎಂ ಸಿದ್ದರಾಮಯ್ಯ ಅವರು ತಯಾರಿ ನಡೆಸಿದ್ದಾರೆ. ಅವರೇ ಹೇಳಿದಂತೆ ಪ್ರತಿಪಕ್ಷಗಳ ವಿರುದ್ಧದ ಹಗರಣಗಳ ಆರೋಪದ ಬಗ್ಗೆ ವಿವರವಾಗಿ ಮಾತನಾಡುವ ನಿರೀಕ್ಷೆಯಿದೆ.

ಕಾಂಗ್ರೆಸ್‌ನ ಈ ಬೃಹತ್‌ ಜನಾಂದೋಲನ ಕಾರ್ಯಕ್ರಮದಕ್ಕೆ ರಾಜ್ಯದ ಹಲವೆಡೆಯಿಂದ ಕಾರ್ಯಕರ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ನಗರದಲ್ಲೇ ತಂಗಿರುವ ಸಿಎಂ ಸಮಾವೇಶ ಯಶಸ್ಸಿಗೆ ಕಾರ್ಯತಂತ್ರ ರೂಪಿಸಿದ್ದಾರೆ.

ರಸ್ತೆಯುದ್ದಕ್ಕೂ ಕಾಂಗ್ರೆಸ್‌ ನಾಯಕರ ಬ್ಯಾನರ್‌, ಕಟೌಟ್ ಗಳು ರಾರಾಜಿಸುತ್ತಿವೆ. ಸಮಾವೇಶದ ಸುತ್ತಲು ಪೊಲೀಸ್‌ ಬಂದೊಬಸ್ತ್‌ ಏರ್ಪಡು ಮಾಡಲಾಗಿದೆ.

Tags:
error: Content is protected !!