ಮೈಸೂರು: ಸಂಪಾದಿಸಿದ್ದರಲ್ಲಿ ಬಡ ಜನರಿಗೆ ಇಂತಿಷ್ಟು ದಾನ ಮಾಡುವುದು ರಂಜಾನ್ ಹಬ್ಬದ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಮಿತಿ ಬೀದಿ ಬದಿ ವ್ಯಾಪಾರಿಗಳ ವಿಭಾಗದ ಮೈಸೂರು ಜಿಲ್ಲಾಧ್ಯಕ್ಷ ಎಂ.ರಸೂಲ್ ಆಹಾರ ಕಿಟ್‌ಗಳನ್ನು ವಿತರಣೆ ಮಾಡಿದರು.
ನಗರದ ಕೆಸರೆ ಕುರಿಮಂಡಿಯಲ್ಲಿ ಹಿಂದೂ-ಮುಸ್ಲಿಂ ಹಾಗೂ ಕ್ರೈಸ್ತ ಸಮುದಾಯದ ಸುಮಾರು 850ಕ್ಕೂ ಹೆಚ್ಚು ಮಂದಿಗೆ ರಂಜಾನ್ ಹಬ್ಬದ ಪ್ರಯುಕ್ತ ಆಹಾರ ಕಿಟ್ ಅನ್ನು ವಿತರಣೆ ಮಾಡಿದರು. ಎನ್‌ಆರ್ ಪೊಲೀಸ್ ಠಾಣೆ ಸರ್ಕಲ್ ಇನ್‌ಸ್ಪೆಕ್ಟರ್ ತಲ್ವಾರ್ ಸಿಂಗ್, ವಳ್ಳಿ, ಹಜರತ್ ಶಬ್ಬೀರ್ ಹುಸೇನ್, ಗುಡ್ಡಪ್ಪ ಕೆಂಪರಾಜು, ಸೌಕತ್ ಅಲಿಖಾನ್, ಸೈಯದ್ -ರೂಖ್, ನವಾಜ್ ಹಾಜರಿದ್ದರು.





