Mysore
17
few clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಮೈಸೂರು: ಹುಲಿ ದಾಳಿಗೆ ಬಾಲಕ ಬಲಿ

ಮೈಸೂರು : ಹಾಡ ಹಗಲೇ ಹುಲಿ ದಾಳಿಗೆ 7ವರ್ಷದ ಬಾಲಕ ಬಲಿಯಾಗಿರುವ ಘಟನೆ ಮೈಸೂರು ಜಿಲ್ಲೆ ಎಚ್‍ಡಿ.ಕೋಟೆ ತಾಲೂಕಿನ ಸಿದ್ಧಾಪುರ ಬಳಿಯ ಕಲ್ಲಹಟ್ಟಿ ಗ್ರಾಮದಲ್ಲಿ ವರದಿಯಾಗಿದೆ.

ಕಲ್ಲಹಟ್ಟಿ ಗ್ರಾಮದ ಚರಣ್ (7) ಮೃತ ಬಾಲಕ ಎಂದು ಗುರುತಿಸಲಾಗಿದೆ.

ಜಮೀನಿನಲ್ಲಿ ಮರದ ಕೆಳಗೆ ಕುಳಿತಿದ್ದ ಬಾಲಕನ ಮೇಲೆ ಹುಲಿ ದಾಳಿ ನಡೆಸಿದೆ. ಚರಣ್ ಪೋಷಕರೊಂದಿಗೆ ತೆರಳಿ ಜಮೀನಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ. ಕೆಲಸದ ನಡುವೆ ನೋಡಿದಾಗ ಕ್ಷಣದಲ್ಲಿ ಬಾಲಕ ಚರಣ್ ಕಣ್ಮರೆಯಾಗಿದ್ದು ಅಲ್ಲಿದ್ದ ಪೋಷಕರು ಪುತ್ರನಿಗಾಗಿ ಹುಡುಕಾಡಿದ್ದಾರೆ.

ಪೋಷಕರು ಜಾಡು ಹಿಡಿದು ಹುಡುಕಿದಾಗ ಕೊಂಚ ದೂರದಲ್ಲಿ ಬಾಲಕನನ್ನು ಹುಲಿ ತಿಂದು ಹಾಕಿದ್ದು ಕಂಡು ಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಬಾರದಿದ್ದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!