Mysore
23
clear sky

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಮೈಸೂರು: ಯತ್ನಾಳ್‌ ಉಚ್ಚಾಟನೆಗೆ ಬಿಜೆಪಿ ಕಾರ್ಯಕರ್ತರ ಆಗ್ರಹ

ಮೈಸೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಬಣದ 38ಮಾಜಿ ಸಚಿವ-ಶಾಸಕರ ತಂಡವು ಶನಿವಾರ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಶಕ್ತಿ ಪ್ರದರ್ಶನ ನಡೆಸಿದೆ.

ಎಂ.ಪಿ ರೇಣುಕಾಚಾರ್ಯ ನೇತೃತ್ವದ ಈ ನಿಯೋಗವು ಬಳಿಕ ನಗರದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದೆ. ಈ ವೇಳೆ ಕಾರ್ಯಕರ್ತರು, ಬಿಜೆಪಿಯ ಭಿನ್ನ ಬಣದ ನಾಯಕ ಬಸವನಗೌಡ ಪಾಟೀಲ ಯತ್ನಾಳ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯತ್ನಾಳ್ ಒಬ್ಬ ಮುಖವಾಡ ಹಾಕಿಕೊಂಡಿರುವ ಹಿಂದೂತ್ವದ ನಾಯಕ. ಬಿಜೆಪಿ ರಾಜ್ಯ ನಾಯಕರ ವಿರುದ್ದ ಹಗುರವಾಗಿ ಮಾತನಾಡೋ ಯತ್ನಾಳ್ ರನ್ನು ಪಕ್ಷದಿಂದ ಉಚ್ಚಾಟನೆ ಮಾಡಿ ಎಂದು ಕಾರ್ಯಕರ್ತರು ಸುದ್ದಿಗೋಷ್ಠಿ ನಡುವೆಯೇ ರೊಚ್ಚಿಗೆದ್ದರು.

ಯಡಿಯೂರಪ್ಪನವರು ರಾಜ್ಯದಲ್ಲಿ ದುಡಿದು ಪಕ್ಷ ಕಟ್ಟಿದ್ದಾರೆ. ಅವರ ವಿರುದ್ದ ಏಕವಚನದಲ್ಲಿ ಮಾತನಾಡ್ತಾನೆ. ಆತನನ್ನು ಪಕ್ಷದಿಂದ ಉಚ್ಚಾಟನೆ ಮಾಡಿ. ಆತನಿಂದ ನಮಗೆ ಯಾವುದೆ ಲಾಭ ಇಲ್ಲ. ಬದಲಿಗೆ ನಮಗೆ ನಷ್ಟ, ನಮ್ಮ ಹಿಂದುತ್ವಕ್ಕೆ ನಷ್ಟ. ಆತನಿಂದ ಕಾರ್ಯಕರ್ತರಿಗೆ ನೋವಾಗಿದೆ ಎಂದು ಯತ್ನಾಳ್‌ ವಿರುದ್ಧ ಏಕವಚನದಲ್ಲಿ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

 

Tags:
error: Content is protected !!