ಮೈಸೂರು: ನಗರದ ನೋಟು ಮುದ್ರಣಾಲಯ ಆವರಣದಲ್ಲಿ ಕಾಣಿಸಿಕೊಂಡಿದ್ದ ಚಿರತೆ ಸತತ ೨೦ ದಿನಗಳ ಬಳಿಕ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಸೆರೆಯಾಗಿದೆ.
ನಗರದ ನೋಟು ಮುದ್ರಾಣಾಲಯ ಆವರಣದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಬಳಿಕ ಸಿಸಿಟಿವಿ ಕ್ಯಾಮೆರಾಗಳ ಮೂಲಕ ಚಿರತೆಯ ಚಲನವಲನ ಕಂಡುಹಿಡಿದು ಆರ್.ಬಿ.ಐ ಮ್ಯಾನೇಜ್‌ಮೆಂಟ್ ಚಿರತೆ ಕಾರ್ಯಪಡೆಗೆ ಮಾಹಿತಿ ನೀಡಿತ್ತು. ಬಳಿಕ ಉಪ ವಲಯ ಅರಣ್ಯಧಿಕಾರಿ ಹಾಗೂ ಚಿರತೆ ಕಾರ್ಯಪಡೆಯಿಂದ ೩೦ ಜನರ ತಂಡವನ್ನು ರಚಿಸಲಾಗಿತ್ತು.
ತಂಡದ ಕಾರ್ಯಾಚರಣೆಯ ನಡುವೆ ಮುದ್ರಣಾಲಯದ ಆವರಣ ಸ್ಥಳ ಪರಿಶೀಲಿಸಿ ಚಿರತೆ ಸೆರೆಗಾಗಿ ಬೋನ್ ಇಡಲಾಗಿತ್ತು. ಶುಕ್ರವಾರ ಬೆಳಿಗ್ಗೆ ಗಂಡು ಚಿರತೆ ಬೋನಿಗೆ ಬಿದ್ದಿದೆ. ಆತಂಕದಲ್ಲಿ ನೌಕರರು ನಿಟ್ಟುಸಿರು ಬಿಟ್ಟಿದ್ದಾರೆ. ಬಳಿಕ ನಗರದ ಅರಣ್ಯ ಭವನಕ್ಕೆ ಚಿರತೆಯನ್ನು ಸ್ಥಳಾಂತರಿಸಿ ಆರೋಗ್ಯ ತಪಾಸಣೆ ನಡೆಸಲಾಗಿದೆ ಎಂದು ಮೈಸೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ಮಾಹಿತಿ ನೀಡಿದ್ದಾರೆ.





