Mysore
33
few clouds

Social Media

ಭಾನುವಾರ, 05 ಏಪ್ರಿಲ 2026
Light
Dark

ಮೈಸೂರು | ಕುಡಿದ ಮತ್ತಿನಲ್ಲಿ ಮನೆಗೆ ಬೆಂಕಿ ಹಚ್ಚಿದ ಯೋಧ!

ಮೈಸೂರು : ಯೋಧನೊಬ್ಬ ಕುಡಿದ ಮತ್ತಿನಲ್ಲಿ ತಮ್ಮ ಮನೆಗೆ ಬೆಂಕಿ ಹಚ್ಚಿದ ಘಟನೆ ನಗರದ ಮಧುವನ ಬಡವಾಣೆಯಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.

ಮಾಜಿ ಸಿ.ಆರ್. ಪಿ. ಎಫ್ ನಿವೃತ್ತ ಯೋದ ಎನ್‌.ಗುರುವಿನಿಂದ ಕೃತ್ಯ.

ಕುಡಿಯಲು ಹೆಂಡತಿ ಬಳಿ ಹಣ ಕೇಳಿದ್ದಾಗ ಆಕೆ ದುಡ್ಡು ಕೊಡದೆ ಮನೆಯಲ್ಲೇ ಕೂಡಿ ಹಾಕಿದ್ದಳು. ಈ ವೇಳೆ ಆತ ಮನೆಯ ರೂಂನ ಹಾಸಿಗೆಗೆ ಬೆಂಕಿ ಹಚ್ಚಿದ್ದಾನೆ. ಪರಿಣಾಮ ಮನೆಯ ತುಂಬ ಹೊಗೆ ಆವರಿಸಿದೆ. ಈ ಹಿನ್ನಲೆ ಗಾಬರಿಗೊಂಡ ಅಕ್ಕಪಕ್ಕದ ನಿವಾಸಿಗಳು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಸ್ಥಳೀಯರ ಸಹಕಾರದೊಂದಿಗೆ ಬೆಂಕಿ ನಂದಿಸಿದ್ದಾರೆ.

ಯಾರಿಗೂ ಯಾವುದೇ ಪ್ರಾಣ ಹಾನಿ ಆಗಿಲ್ಲ. ಮನೆಯ ಕೆಲ ಸಣ್ಣಪುಟ್ಟ ಸಾಮಾನುಗಳು ಬೆಂಕಿಗಾಹುತಿಯಾಗಿವೆ.

Tags:
error: Content is protected !!