ಮೈಸೂರು : ಪಾರ್ಶ್ವವಾಯು ಪೀಡಿತ ವ್ಯಕ್ತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಹೆಬ್ಬಾಳಿನ ಲಕ್ಷ್ಮಿಕಾಂತನಾಗರದಲ್ಲಿ ಜರುಗಿದೆ.
ಹೆಬ್ಬಾಳಿನ ಲಕ್ಷ್ಮಿಕಾಂತ ನಗರದ ನಿವಾಸಿ ರಾಜು (೫೩) ಮೃತಪಟ್ಟವರು.
ಇವರ ಸಾವಿಗೆ ನೆರೆ ಮನೆಯ ನಿವಾಸಿಗಳಾದ ಶ್ರೀನಿವಾಸ ಮತ್ತು ಮಂಜುಳಾ ದಂಪತಿ ಕಾರಣ ಎಂದು ಆರೋಪಿಸಿ ಮೃತರ ಪತ್ನಿ ದೂರು ನೀಡಿದ್ದು, ಹೆಬ್ಬಾಳು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನನ್ನ ಪತಿ ಸೆಲ್ಛಿ ವಿಡಿಯೋ ಮಾಡಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದು, ತಕ್ಷಣ ಅವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ವಿಡಿಯೋದಲ್ಲಿ ಹೇಳಿರುವಂತೆ ಆತ್ಮಹತ್ಯೆಗೆ ನೆರೆಯ ನಿವಾಸಿಗಳಾದ ಶ್ರೀನಿವಾಸ ಮತ್ತು ಮಂಜುಳಾ ದಂಪತಿ ಕಾರಣ ಎಂದು ಮೃತರ ಪತ್ನಿ ಜಯಪ್ರದ ದೂರಿನಲ್ಲಿ ತಿಳಿಸಿದ್ದಾರೆ.



