ಮೈಸೂರು: ಕ್ಷುಲ್ಲಕ ಕಾರಣಕ್ಕೆ ಉಂಟಾದ ಜಗಳದಿಂದ ಮನನೊಂದು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದು, ಇತ್ತ ಆಕೆಯ ಸಾವಿನ ಸುದ್ದಿ ತಿಳಿದ ಪ್ರಿಯಕರ ಸಹ ಆತ್ಯಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.
ನಗರದ ದಟ್ಟಗಳ್ಳಿ ಹಾಗೂ ಜ್ಯೋತಿ ನಗರದ ಮೋನಿಕಾ(20) ಮತ್ತು ಮನು(22) ಸಾವಿಗೆ ಶರಣಾದ ಪ್ರೇಮಿಗಳು.
ಮಂಡಕಳ್ಳಿ ಗ್ರಾಮದ ನಿವಾಸಿ ಮೋನಿಕಾ ಹಾಗೂ ಜ್ಯೋತಿನಗರದ ಮನು ಕಳೆದು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಮನೆಯಲ್ಲಿ ಇಬ್ಬರಿಗೂ ಮದುವೆ ಮಾಡಲು ಕುಟುಂಬಸ್ಥರು ತೀರ್ಮಾನಿಸಿದ್ದರು. ಈ ನಡುವೆ, ಇತ್ತಿಚೇಗೆ ಈ ಜೋಡಿ ಮಧ್ಯ ಮನಸ್ತಾಪ ಉಂಟಾಗಿದೆ. ಜತೆಗೆ ಸಣ್ಣ ಪ್ರಮಾಣದ ಗಲಾಟೆಯು ಸಹ ನಡೆದಿದೆ ಎನ್ನಲಾಗಿದೆ.
ಇದರಿಂದ ಮನನೊಂದ ಯುವತಿ ನೇಣಿಗೆ ಶರಣಾಗಿದ್ದಾಳೆ. ವಿಷಯ ತಿಳಿದ ಮನು ಸ್ಥಳಕ್ಕೆ ಧಾವಿಸಿ ಮೋನಿಕಾಳನ್ನು ಆಸ್ಪತ್ರೆಗೆ ಕರೆತಂದಿದ್ದಾನೆ. ಆದರೆ, ಮೋನಿಕಾ ಅಷ್ಟೋತ್ತಿಗಾಗಲೇ ಮೃತಪಟ್ಟಿದ್ದಳು.
ತನ್ನ ಪ್ರೇಯಸಿ ಮೋನಿಕಾ ಸಾವಿನಿಂದ ಮನನೊಂದ ಮನು ಸಹ ಸಾವಿನ ಹಾದಿ ತುಳಿದಿದ್ದಾನೆ.