ಮೈಸೂರು: ನಗರದ ಸರಸ್ವತಿಪುರಂ ರಸ್ತೆಯಲ್ಲಿ ದೊಡ್ಡ ಗಾತ್ರದ ಮರವೊಂದು ಉರುಳಿಬಿದ್ದಿದ್ದು, ಮರದಡಿ ಸಿಲುಕಿ ಎರಡು ಆಟೊಗಳು ಜಖಂ ಆಗಿವೆ.
ಶನಿವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಸರಸ್ವತಿಪುರಂ ಪೊಲೀಸ್ ಠಾಣೆ ವ್ಯಾಪ್ತಿಯ 14 ನೇ ಮುಖ್ಯ ರಸ್ತೆಯಲ್ಲಿ ಈ ಘಟನೆ ನಡೆದಿದೆ.
ಆಟೊದಲ್ಲಿದ್ದ ಚಾಲಕ ಹಾಗೂ ಬೀದಿ ಬದಿ ವ್ಯಾಪಾರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಟೊಗಳು ಭಾಗಶಃ ಜಖಂ ಆಗಿವೆ.
ಬೀದಿ ಬದಿ ವ್ಯಾಪಾರಿ ತಲೆಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಹತ್ತಿರದ ಅಗಸ್ತ್ಯ ಹಾಸ್ಪಿಟಲ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮರವು ವಿದ್ಯುತ್ ಕಂಬದ ಮೇಲೂ ಬಿದ್ದುದ್ದರಿಂದ ಸಾರ್ವಜನಿಕರು ಗಾಬರಿಯಾಗಿ ಓಡಿ ಹೋದರು.
ಸ್ಥಳೀಯ ನಿವಾಸಿ ಜಿಲ್ಲಾಧಿಕಾರಿ ಕಂಟ್ರೊಲ್ ರೂಂ ಸಿಬ್ಬಂದಿ ಕೀರ್ತಿ ಸ್ಥಳದಲ್ಲಿದ್ದರಿಂದ ತಕ್ಷಣ ಕಂಟ್ರೊಲ್ ರೊಂಗೆ ಮಾಹಿತಿ ನೀಡಿದರು. ಬಳಿಕ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಪಾಲಿಕೆ ಸಿಬ್ಬಂದಿ ಮರ ತೆರವು ಮಾಡುತ್ತಿದ್ದಾರೆ.

ಸ್ಥಳೀಯರ ಆಕ್ರೋಶ
ಸ್ಥಳಕ್ಕೆ ಬಂದ ಪಾಲಿಕೆ ಹಾಗೂ ಚೆಸ್ಕಂ ಸಿಬ್ಬಂದಿ ಮರ ತೆರವುಗೊಳಿಸಲು ಮುಂದಾದಾಗ, ಸ್ಥಳೀಯರು ಅಡ್ಡಿಪಡಿಸಿ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಉನ್ನತ ಅಧಿಕಾರಿಗಳು ಭೇಟಿ ನೀಡಬೇಕು, ಆಟೋ ಹಾಗೂ ಚಿಕಿತ್ಸೆ ನೆರವು ನೀಡಬೇಕು ಹಾಗೂ ಮರವನ್ನು ಸಂಪೂರ್ಣ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.





