ಮೈಸೂರು : ಇಲ್ಲಿನ ಕೆ. ಜಿ. ಕೊಪ್ಪಲಿನ ಸಿದ್ದಪ್ಪಾಜಿ ವೃತ್ತದಲ್ಲಿ ನಡುರಾತ್ರಿ ಲಾಂಗ್ ಬಿಸಾಡಿ ಭಯದ ವಾತಾವರಣ ಸೃಷ್ಟಿಸಿದ ಘಟನೆ ಜರುಗಿದೆ.
ಮರಕಾಸ್ತ್ರ ಬಿಸಾಡಿದ ಮೋಹನ್ ಹಾಗೂ ರಕ್ಷತ್ ಎಂಬುವರ ವಿರುದ್ಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೌಡಿ ಶೀಟರ್ ಮೋಹನ್ ಲಾಂಗ್ ಪ್ರದರ್ಶಿಸಿರುವ ಬಗ್ಗೆ ಠಾಣೆ ಸಾಮಾಜಿಕ ಮಾಧ್ಯಮ ವೀಕ್ಷಕ ಘಟಕದ ಬಸವರಾಜ ಅರಸ್ ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಈ ಬಗ್ಗೆ ತನಿಖೆ ಸಹ ನಡೆಯುತ್ತಿದೆ.





