ಮೈಸೂರು: ಜಿಲ್ಲೆಯ ವಿವಿಧೆಡೆ ನಿನ್ನೆ(ಜೂ.1) ಸಂಜೆ ಸುರಿದ ಭಾರಿ ಮಳೆಗೆ ನೂರಾರು ಎಕರೆಯ ಬೆಳೆಗಳು ನಾಶವಾಗಿದ್ದು, ಮರಗಳು ಧರೆಗುರುಳಿ ಅವಾಂತರ ಸೃಷ್ಟಿಸಿದೆ. ಹೂಣಸೂರಿನ ಹಲವೆಡೆ ಭಾರಿ ಮಳೆ ಯಾಗಿದ್ದು ಶುಂಠಿ, ತಂಬಾಕು, ಮುಸುಕಿನ ಜೋಳದ ಬೆಳೆಗಳು ನಾಶವಾಗಿದೆ.
ಜಿಲ್ಲೆಯ ನಂಜನಗೂಡು ತಾಲೂಕಿನ ಚಿಕ್ಕಹೊಮ್ಮ, ಡೊಡ್ಡ ಹೊಮ್ಮ ಸೇರಿದಂತೆ ಹಲವೆಡೆ ಭರ್ಜರಿ ಮಳೆಯಾಗಿದೆ. ಗಾಳಿಯೊಂದಿಗೆ ಬಂದ ಮಳೆ ಹತ್ತಾರು ಎಕರೆಯ ಬಾಳೆ ಬೆಳೆಯನ್ನು ನಾಶಪಡಿಸಿದೆ. ಚಿಕ್ಕಹೊಮ್ಮ ಗ್ರಾಮದ ನಾಗೇಂದ್ರ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಅಂದಾಜು ಎರಡು ಸಾವಿರ ಬಾಳೆ ಬೆಳೆ ನೆಲಕಚ್ಚಿದೆ. ಇನ್ನೇನು ಕಾಟಾವಿನ ಹಂತದಲ್ಲಿದ್ದ ಬಾಳೆಗಿಡಗಳು ವರ್ಷಧಾರೆಯಿಂದ ನಾಶವಾದ ಬಗ್ಗ ರೈತ ನಾಗೇಂದ್ರ ಬೇಸರ ವ್ಯಕ್ತಪಡಿಸಿದ್ದಾರೆ. ಲಕ್ಷಾಂತರ ರೂಪಾಯಿ ನಷ್ಟಕ್ಕೊಳಗಾದ ರೈತರು ಸೂಕ್ತ ಪರಿಹಾರಕ್ಕೆ ಆಗ್ರಹಿಸಿದ್ದಾರೆ.