Mysore
26
few clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

ಸಂಗೀತ ವಿವಿ ಘಟಿಕೋತ್ಸವ | 540 ಮಂದಿಗೆ ಪದವಿ, 27 ವಿದ್ಯಾರ್ಥಿಗಳಿಗೆ ಚಿನ್ನದ ಪದಕ

ಮೈಸೂರು:  ಇಲ್ಲಿನ ಸಂಗೀತ ವಿಶ್ವವಿದ್ಯಾಲಯ ಆವರಣದಲ್ಲಿ ಶನಿವಾರ ನಡೆದ ಮೂರು ಶೈಕ್ಷಣಿಕ ವರ್ಷಗಳ ಘಟಿಕೋತ್ಸವದಲ್ಲಿ ಒಟ್ಟು 450 ವಿದ್ಯಾರ್ಥಿಗಳು ಪದವಿ ಸ್ವೀಕರಿಸಿದರು. 27 ವಿದ್ಯಾರ್ಥಿಗಳು 69 ಚಿನ್ನದ ಪದಕಗಳೊಂದಿಗೆ ಸಂಭ್ರಮಿಸಿದರು.

2021-22 ನೇ ಸಾಲಿನಲ್ಲಿ ಎಂಪಿಎ ವಿಭಾಗದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ವಿಷಯದಲ್ಲಿ ರ‍್ಯಾಂಕ್ ಜೊತೆಗೆ 9 ಚಿನ್ನದ ಪದಕಗಳನ್ನು ವಿಶಾಖಪಟ್ಟಂ ಮೂಲದ ವಿ.ವಿಜಯಶ್ರೀ ಪಡೆದು ಗಮನ ಸೆಳೆದರು. ಬಿಟೆಕ್ ಪದವೀಧರೆಯಾಗಿರುವ ವಿಜಯಶ್ರೀ ಕಳೆದ 8 ವರ್ಷಗಳಿಂದ ಪತಿ ಮತ್ತು ಮಕ್ಕಳೊಂದಿಗೆ ಶ್ರೀರಂಗಪಟ್ಟಣದ ಬೆಳಗೋಳದಲ್ಲಿ ನೆಲೆಸಿದ್ದಾರೆ.

ಎಂಪಿಎ ವಿಭಾಗದಲ್ಲಿ 2022-23 ನೇ ಸಾಲಿನಲ್ಲಿ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ವಿಷಯದಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರದ ಎಲ್.ಬಿ.ಬಿಂದು 6 ಚಿನ್ನದ ಪದಕ ಪಡೆದರೆ, ಕೀರ್ತನಾ 5 ಚಿನ್ನ ಪಡೆದರು.

ಇನ್ನೂ 2023-24ನೇ  ಸಾಲಿನಲ್ಲಿ ಕೆ.ಆರ್.ಅಶ್ವಿನಿ ಹಾಗೂ ಬಿ.ಆರ್.ಮನೋಜ್ ತಲಾ 6 ಚಿನ್ನದ ಪದಕ ಗಳಿಸಿದರು. ಬಿಪಿಎ ವಿಭಾಗದಲ್ಲಿ ಆರ್.ರಂಜಿನಿಶ್ರೀ 6, ಪಿ.ಆರ್.ರೂಪಾ 5 ಚಿನ್ನದ ಪದಕ ಪಡೆದರು. 14 ಮಂದಿಗೆ ಡಿ.ಲಿಟ್ ಪದವಿ ಪ್ರದಾನ ಮಾಡಲಾಯಿತು. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಪದವಿ ಪ್ರದಾನ ಮಾಡಿದರು.

Tags:
error: Content is protected !!