ಮೈಸೂರು: ಮುಡಾದ 50:50 ಅನುಪಾತದ ಬದಲಿ ನಿವೇಶನ ಪ್ರಕರಣದಲ್ಲಿ ಯಾರಿಂದಲೂ ಸತ್ಯ ಮರೆ ಮಾಚಲು ಸಾಧ್ಯವಿಲ್ಲ ಎಂದು ದೂರುದಾರರ ಸ್ನೇಹಮಯಿ ಕೃಷ್ಣ ತಿಳಿಸಿದ್ದಾರೆ.
ಮೈಸೂರಿನಲ್ಲಿ ಇಂದು(ಮಾರ್ಚ್.19) ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಡಾದಿಂದ 50:50 ಅನುಪಾತದ ಬದಲಿ ನಿವೇಶನದಲ್ಲಿ ಸಿಎಂ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರಿಗೆ ಅಕ್ರಮವಾಗಿ ನಿವೇಶನಗಳನ್ನು ನೀಡಲಾಗಿದೆ. ಇದರಿಂದ ಮುಡಾಗೆ ಆರ್ಥಿಕ ನಷ್ಟವಾಗಿದೆ ಎಂದು ಲೋಕಾಯುಕ್ತ ವರದಿಯಲ್ಲಿ ಉಲ್ಲೇಖ ಮಾಡಿದ್ದಾರೆ. ಆದರೆ ಒಂದು ಕಡೆ ಪಾರ್ವತಿ ಸಿದ್ದರಾಮಯ್ಯ ಅವರಿಗೆ ಮುಡಾ ಕಚೇರಿಯೇ ನಿವೇಶನ ನೀಡಿದ್ದಾರೆ ಹೇಳದ್ದಾರೆ. ಮತ್ತೊಂದು ಕಡೆ ಈ ಪ್ರಕರಣದಲ್ಲಿ ಆರೋಪಿಗಳ ಪಾತ್ರವಿಲ್ಲವೆಂದು ಹೇಳಿದ್ದಾರೆ. ಹೀಗಾಗಿ ಸೋಮವಾರ(ಮಾರ್ಚ್.18) ನಾನೇ ಕೋರ್ಟ್‌ನಲ್ಲಿ ವಾದ ಮಂಡಿಸಿದ್ದೇನೆ ಎಂದು ಹೇಳಿದರು.
ಈ ಪ್ರಕರಣದ ಬಗ್ಗೆ ವಾದ ಮಂಡನೆ ಮಾಡುವ ವೇಳೆ ನಿಖಾಧಿಕಾರಿ ಹೇಳಿದ್ದು, ವರದಿ ನೀಡಿದ್ದು ನಿಜವಲ್ಲ. ಅವರು ಸಿಎಂ ಪ್ರಭಾವಕ್ಕೆ ಸಿದ್ದರಾಮಯ್ಯ ಒಳಗಾಗಿ ವರದಿ ನೀಡಿದ್ದಾರೆಂದು ಹೇಳಿದ್ದೇನೆ. ಆದ್ದರಿಂದಲೇ ಕೋರ್ಟ್, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳು ಸ್ಪಷ್ಟೀಕರಣ ನೀಡುವಂತೆ ಆದೇಶ ಹೊರಡಿಸಿದೆ. ಅಲ್ಲದೇ ಈ ವಿಚಾರಣೆಯನ್ನು ಮಾರ್ಚ್.24ಕ್ಕೆ ಮುಂದೂಡಲಾಗಿದೆ. ಆ ದಿನ ಲೋಕಾಯುಕ್ತ ಅಧಿಕಾರಿಗಳು ಏನೂ ಸ್ಪಷ್ಟೀಕರಣ ನಿಡುತ್ತಾರೋ ನೀಡಲಿ. ಆದರೆ ಅಕ್ರಮ ಆಗಿರುವುದು ನಿಜವೆಂದು ನಾನು ಸಾಬೀತು ಮಾಡೇ ಮಾಡುತ್ತೇನೆ ಎಂದರು





