Mysore
20
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ʻಇ.ಡಿʼ ಯಿಂದ ʻಮುಡಾʼ ಸ್ವಚ್ಛವಾಗಲಿದೆ: ಕೇಂದ್ರ ಸಚಿವ ಸೋಮಣ್ಣ

ಮೈಸೂರು: ಮೈಸೂರು ನಗಾರಾಭಿವೃದ್ಧಿ ಪ್ರಾಧಿಕಾರದಲ್ಲಿ(ಮುಡಾ) ಇಷ್ಟೊಂದು ಅಕ್ರಮ ನಡೆದಿದೆ ಎಂದು ಕೊಂಡಿರಲಿಲ್ಲ. ಇದೊಂದು ಜನಪ್ರತಿನಿಧಿಗಳು ತಲೆ ತಗ್ಗಿಸುವ ವಿಚಾರ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದರು.

ಮಂಗಳವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಈ ಹಿಂದೆ ಮೈಸೂರು ಜಿಲ್ಲಾ ಸಚಿವನಾಗಿದ್ದಾಗ. ನಾನು ಮಾಜಿ ಸಂಸದ ಪ್ರತಾಪ್‌ ಸಿಂಹ ಎಲ್ಲರೂ ಸೇರಿ ಮುಡಾದ ಸೈಟುಗಳ ಬಗ್ಗೆ ಮಾಹಿತಿ ಪಡೆದಿದ್ದೊ. 7200 ಸೈಟುಗಳನು ಪತ್ತೆ ಹಚ್ಚಿ ಹರಾಜು ಹಾಕಲು ತೀರ್ಮಾನ ಮಾಡಿದ್ದವು ಎಂದರು.

ಈ ಹಿಂದೆ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಅಭಿರಾಮ್‌ ಜಿ.ಶಂಕರ್‌, ಮುಡಾ ಆಯುಕ್ತ ಕಾಂತರಾಜ್‌ ಎಲ್ಲರೂ ಜನ ಪರ ಕೆಲಸ ಮಾಡಲು ನಿರ್ಧಾರ ಮಾಡಿದ್ದವು. ಆದರೆ ಅದು ಆಗಲಿಲ್ಲ. ಈಗ ತನಿಖೆ ನಡೆಯುತ್ತಿದೆ, ನಡೆಯಲಿ ಎಲ್ಲಾ ಅಕ್ರಮ ಹೊರ ಬರಲಿ ಎಂದರು.

ಮುಡಾ ತನಿಖೆಯನ್ನು ಜಾರಿ ನಿರ್ದೇಶಾಲಯವು ಕೈಗೆತ್ತಿಕೊಂಡಿದ್ದು, ಇದರಿಂದ ಮುಡಾ ಸ್ವಚ್ಛವಾಗಲಿದೆ ಎಂದು ಹೇಳಿದರು.

ಶೋಭಾ ಕರಂದ್ಲಾಜೆ ಚಿನ್ನವಿದ್ದಂತೆ…
ಶೋಭಾ ಕರಂದ್ಲಾಜೆ ಪುಟವಿಟ್ಟ ಚಿನ್ನವಿದ್ದಂತೆ. ಒಬ್ಬ ಹೆಣ್ಣುಮಗಳ ಬಗ್ಗೆ ಮತಾನಾಡುವುದು ಅವರು ಕೀಳುಮಟ್ಟ ಭಾವನೆಯನ್ನು ತೋರಿಸುತ್ತದೆ. ಅವರ ಘನತೆಗೆ ಇದು ತಕ್ಕದ್ದಲ್ಲ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್‌ ಅವರ ವಿರುದ್ಧ ಸೋಮಣ್ಣ ಕಿಡಿಕಾರಿದರು.

 

 

Tags: