Mysore
16
few clouds

Social Media

ಸೋಮವಾರ, 08 ಡಿಸೆಂಬರ್ 2025
Light
Dark

ಮುಡಾ ಹಗರಣ: ಲೋಕಾಯುಕ್ತದಿಂದ ನಾಳೆಯೇ ಐಜಿಪಿಗೆ 3,000 ಪುಟಗಳ ವರದಿ ಸಲ್ಲಿಕೆ ಸಾಧ್ಯತೆ

ಮೈಸೂರು: ಮುಡಾದಿಂದ ಪಾರ್ವತಿ ಸಿದ್ದರಾಮಯ್ಯ ಅವರಿಗೆ ಮಂಜೂರಾದ 14 ನಿವೇಶನಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತದಿಂದ ವಿಚಾರಣೆ ನಡೆಸಿದ್ದು, ಅಂತಿಮ ವರದಿ ನಾಳೆಯೇ ಕರ್ನಾಟಕ ಲೋಕಾಯುಕ್ತ ಐಜಿಪಿ ಸುಬ್ರಮಣ್ಣೇಶ್ವರ ರಾವ್‌ ಅವರಿಗೆ ಸಲ್ಲಿಕೆಯಾಗಲಿದೆ.

ಲೋಕಾಯುಕ್ತ ಅಧಿಕಾರಿಗಳು ಮುಡಾ ಪ್ರಕರಣ ವಿಚಾರವಾಗಿ ಈಗಾಗಲೇ ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ ಸಿದ್ದರಾಮಯ್ಯ, ಬಾಮೈದ ಮಲ್ಲಿಕಾರ್ಜುನ ಹಾಗೂ ದೇವರಾಜ್‌ ಎಂಬುವವರನ್ನು ವಿಚಾರಣೆ ನಡೆಸಿದೆ. ಅಲ್ಲದೇ ಮುಡಾ ನಿವೇಶನಕ್ಕೆ ಸಂಬಂಧಿಸಿದಂತೆ ನಡೆಸಿದ ತನಿಖೆಯನ್ನು ಸೇರಿದಂತೆ ವಿಚಾರಣೆಯ ಎಲ್ಲಾ ಅಂಶಗಳನ್ನು ಒಟ್ಟು 3,000 ಪುಟಗಳ ವರದಿಯಲ್ಲಿ ದಾಖಲಿಸಿದೆ. ಹೀಗಾಗಿ ಈ ವರದಿಯನ್ನು ನಾಳೆಯೇ ಕರ್ನಾಟಕ ಲೋಕಾಯುಕ್ತ ಐಜಿಪಿ ಅವರಿಗೆ ಮೈಸೂರು ಲೋಕಾಯುಕ್ತ ಎಸ್‌ಪಿ ಉದೇಶ್‌ ಅವರು ಸಲ್ಲಿಸುವ ಸಾಧ್ಯತೆಗಳಿವೆ ಎಂಬ ಮಾಹಿತಿ ಲಭ್ಯವಾಗಿದೆ.

ಇನ್ನೂ ಮುಡಾ ಪ್ರಕರಣದ ಬಗ್ಗೆ ಎಸ್‌ಪಿ ಉದೇಶ್‌ ಅವರು ನಾಳೆಯೇ(ಜನವರಿ.25) ತಮ್ಮ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ. ಬಳಿಕ ಲೋಕಾಯುಕ್ತ ಐಜಿಪಿ ಅವರು ಸೋಮವಾರ ಹೈಕೋರ್ಟ್‌ ಎದುರು ವರದಿ ಸಲ್ಲಿಕೆ ಮಾಡಲಿದ್ದಾರೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ.

Tags:
error: Content is protected !!