ಮೈಸೂರು/ಬೆಂಗಳೂರು: ಮೈಸೂರು ನಗಾರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ನಿವೇಶನ ಹಂಚಿಕೆ ಪ್ರಕರಣವನ್ನು ರದ್ದುಪಡಿಸುವಂತೆ ತುರ್ತಾಗಿ ಜಮೀನು ಮಾಲೀಕ ದೇವರಾಜು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಹೈಕೋರ್ಟ್‌ನಲ್ಲಿ ನವೆಂಬರ್ 23 ರಂದು ಅರ್ಜಿ ವಿಚಾರಣೆ ನಡೆಸುವಂತೆ ನಿಗಧಿಪಡಿಸಲಾಗಿದ್ದು, ದೇವರಾಜು ಪರ ಹಿರಿಯ ವಕೀಲ ದುಷ್ಯಂತ್ ಅವರು ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ಅರ್ಜಿಯಲ್ಲಿ ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧದ ತನಿಖೆಯಲ್ಲಿ ನನ್ನದು ಏನು ತಪ್ಪಿಲ್ಲದಿದ್ದರೂ ನಾನು ತನಿಖೆ ಎದುರಿಸಬೇಕಾಗಿದೆ. ಅಲ್ಲದೇ 2004ರಲ್ಲಿ ಮಾರಾಟವಾದ ನಿವೇಶನದ ಬಗ್ಗೆ ಈಗ ಪ್ರಶ್ನೆ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ತುರ್ತು ವಿಚಾರಣೆಗೆ ದೇವರಾಜು ಪರ ವಕೀಲರು ಮನವಿ ಮಾಡಿದ್ದಾರೆ.