ಮೈಸೂರು: ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕ್ ಬ್ಯಾಂಕ್ ವ್ಯವಹಾರಗಳ ಕುರಿತು ಹೆಚ್ಚು ಜಾಗೃತಿ ಮೂಡಿಸಿ ಸೈಬರ್ ಕ್ರೈಂ ನಂತಹ ಕೃತ್ಯಗಳ ಬಗ್ಗೆ ಪ್ರತಿಯೊಂದು ಬ್ಯಾಂಕ್‌ಗಳು ಗಮನ ಹರಿಸಬೇಕು ಎಂದು ಅಧಿಕಾರಿಗಳಿಗೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು(ಫೆಬ್ರವರಿ.21) ಡಿಸಿಸಿ ಮತ್ತು ಡಿಎಲ್‌ಆರ್‌ಸಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರತಿಯೊಂದು ಬ್ಯಾಂಕ್‌ಗಳು ಪ್ರತಿ ಕೇಂದ್ರಗಳಲ್ಲೂ ಕ್ಯಾಂಪೇನ್‌ಗಳನ್ನು ನಡೆಸಬೇಕು. ನೂತನ ಯೋಜನೆಗಳ ಮೂಲಕ ಸಾರ್ವಜನಿಕ ಕನಸುಗಳಿಗೆ ಜೀವವನ್ನು ತುಂಬಬೇಕು. ಅಲ್ಲದೇ ಅಧಿಕ ಸಮಯವನ್ನು ಬ್ಯಾಂಕ್ ವ್ಯವಹಾರಗಳನ್ನು ನೀಡುವ ಜೊತೆಗೆ ಹೆಚ್ಚು ಅಂಕಿ ಸಂಖ್ಯೆಗಳ ಡೇಟಾವನ್ನೂ ಸಂಗ್ರಹ ಮಾಡಬೇಕು ಎಂದು ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.
ಇದೇ ವೇಳೆ ಜಿಲ್ಲಾ ಬ್ಯಾಂಕ್‌ವಾರು ಯಾವ ಯಾವ ಬ್ಯಾಂಕ್‌ಗಳು ಕೃಷಿಗೆ, ವಸತಿಗಳಿಗೆ, ಶಿಕ್ಷಣ, ವೈಯಕ್ತಿಕ ಲೋನ್ ಮತ್ತು ಇತರ ಲೋನ್‌ಗಳನ್ನು ನೀಡುವುದರ ಮೂಲಕ ಬ್ಯಾಂಕ್‌ಗಳು ಎಷ್ಟು ಗುರಿ ತಲುಪಿದೆ ಎಂಬುದನ್ನು ವಿವಿಧ ಜಿಲ್ಲಾ ಬ್ಯಾಂಕ್‌ಗಳ ಪ್ರಕಾರ ಮಾಹಿತಿ ಪಡೆದುಕೊಂಡಿದ್ದಾರೆ.
ಇನ್ನು ಶಿಕ್ಷಣ ಸಾಲಗಳ ಅಡಿಯಲ್ಲಿ ಕಾರ್ಯಕ್ಷಮತೆಯ ಬಗ್ಗೆ, ಜನ ಸುರಕ್ಷಾ ಯೋಜನೆಗಳ ಅಡಿಯಲ್ಲಿ ಪ್ರಗತಿ ಪರಿಶೀಲನೆ ನಡೆಸುವುದರ ಕುರಿತು ಜಿಲ್ಲೆಗಾಗಿ ಸಂಭಾವ್ಯ ಲಿಂಕ್ಡ್ ಯೋಜನೆ ಹಾಗೂ ಹಣಕಾಸು ಸೇರ್ಪಡೆ ಯೋಜನೆಯನ್ನು ಆರಂಭಿಸುವುದರ ಕುರಿತು ಸಭೆಯಲ್ಲಿ ಸಮಾಲೋಚನೆ ಮಾಡಲಾಗಿದೆ.





