ಮೈಸೂರು/ಕೊಡಗು: ಜಿಲ್ಲೆಯ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಮಾಡಿಕೊಂಡಿದ್ದು, ಇಂದು ಅವರ ಪಾರ್ಥಿವ ಶರೀರಕ್ಕೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಂತಿಮ ನಮನ ಸಲ್ಲಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಇಂದು ಕೊಡಗು ಜಿಲ್ಲೆಯ ಗೋಣಿಮರೂರಿನಲ್ಲಿ ರಾಜಕೀಯ ಪ್ರೇರಿತ ಕಿರುಕುಳˌ ಆಡಳಿತ ಪಕ್ಷದ ದೌರ್ಜನ್ಯದ ಒತ್ತಡಕ್ಕೆ ಮನನೊಂದು ಸಾವಿಗೆ ಶರಣಾದ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ ವಿನಯ್ ಸೋಮಯ್ಯ ಅವರ ನಿವಾಸಕ್ಕೆ ತೆರಳಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಮೃತ ಕಾರ್ಯಕರ್ತನ ಕುಟುಂಬಸ್ಥರಿಗೆ ಸಾಂತ್ವನ ಹೇಳಲಾಯಿತು ಎಂದು ಸಂತಾಪ ಸೂಚಿಸಿದ್ದಾರೆ.