ಮೈಸೂರು: ಬಾಹ್ಯಾಕಾಶದಲ್ಲಿ 286 ದಿನಗಳ ಕಾಲ ತಮ್ಮ ನಡಿಗೆಯನ್ನು ಪೂರೈಸಿ ಭೂಮಿಗೆ ತೆರಳಿದ ಸುನೀತಾ ವಿಲಿಯಮ್ಸ್ ಅವರಿಗೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿನಂದನೆ ಸಲ್ಲಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಸಂಶೋಧನೆಯ ನಿಮಿತ್ತ ಒಂದು ವಾರದ ಮಟ್ಟಿಗೆ ಬಾಹ್ಯಕಾಶ ಯಾನ ಕೈಗೊಂಡು ತಾಂತ್ರಿಕ ದೋಷದಿಂದ ಭೂಮಿಗೆ ಮರಳಲಾಗದೆ ಸರಿಸುಮಾರು ಒಂಬತ್ತು ತಿಂಗಳುಗಳ ಕಾಲ ಬಾಹ್ಯಾಕಾಶದಲ್ಲೆ ಸಿಲುಕಿಕೊಂಡಿದ್ದ ಸುನಿತಾ ವಿಲಿಯಮ್ಸ್ ಹಾಗೂ ಜೊತೆಗಾರನನ್ನು ಸ್ಪೇಸ್ ಎಕ್ಸ್‌ನ ಡ್ರ್ಯಾಗನ್ ನೌಕೆ ಭೂಮಿಗೆ ವಾಪಸ್ ಕರೆತರುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ.
ಇನ್ನು ಅಂತಹ ಸಂದಿಗ್ಧತೆಯನ್ನು ದಿಟ್ಟತನದಿಂದ ಎದುರಿಸಿ ವಾಪಾಸ್ ಭೂಮಿಗೆ ಮರಳಿದ ಭಾರತೀಯ ಮೂಲದ ವೀರ ಮಹಿಳೆ ಸುನಿತಾ ವಿಲಿಯಮ್ಸ್ ಹಾಗೂ ಅವರ ಜೊತೆಗಾರ ವಿಲ್ಮೋರ್ ಅವರಿಗೆ ಅಭಿನಂದನೆಗಳು ಎಂದು ತಿಳಿಸಿದ್ದಾರೆ.





