Mysore
20
overcast clouds
Light
Dark

ಜಾತಿ ಪ್ರಮಾಣ ಪತ್ರ ಪ್ರದರ್ಶಿಸಿ ಬಿಜೆಪಿಗೆ ಟಾಂಗ್‌ ಕೊಟ್ಟ ಲಕ್ಷ್ಮಣ್‌

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳಿಗೆ ಗೆಲುವೊಂದೆ ಮಾನದಂಡವಾಗಿದೆ. ಇಲ್ಲಿ ಗೆಲುವು ಸಾಧಿಸಲು ಒಕ್ಕಲಿಗೆ ಸಮುದಾಯ ಮತಗಳೇ ನಿರ್ಣಾಯಕ. ಸದ್ಯ ಮೈಸೂರಿನಲ್ಲಿ ಒಕ್ಕಲಿಗ ಜಾತಿ ಕಾರ್ಡ್‌ ವಿಚಾರ ತಾರಕಕ್ಕೇರಿದ್ದು, ಕಾಂಗ್ರೆಸ್‌ ಅಭ್ಯರ್ಥಿ ಎಂ.ಲಕ್ಷ್ಮಣ್‌ ಒಕ್ಕಲಿಗ ಜಾತಿ ಪ್ರಮಾಣ ಪತ್ರ ಪ್ರದರ್ಶಿಸಿ ಬಿಜೆಪಿ ವಿರುದ್ಧ ಗುಡುಗಿದ್ದಾರೆ.

ನಾನು ಒಕ್ಕಲಿಗನಾಗಿ ಹುಟ್ಟಿ, ಬೆಳೆಯುತ್ತಾ ವಿಶ್ವಮಾನವನಾದೆ. ನಾನು ಎಲ್ಲಾ ಜಾತಿಯವರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವವನು. ಬಿಜೆಪಿಯವರು ಇಂತ ಚೀಪ್‌ ಪಾಲಿಟಿಕ್ಸ್‌ ಕೈ ಬೀಡಬೇಕು. ನನಗೆ ಜಾತಿ ಸುಳ್ಳು ಹೇಳುವ ಅಗತ್ಯವಿಲ್ಲ. ಪ್ರತಾಮ್‌ ಸಿಂಹ ಮೊದಲ ಬಾರಿ ಚುನಾವಣೆ ನಿಂತಾಗ ಗೌಡ ಅಂತ ಹೆಸರು ಬದಲಿಸಿಕೊಡ್ರು, ಅದೇ ರೀತಿ ನಾನು ಲಕ್ಷ್ಮಣ್‌ ಗೌಡ ಅಂತಾ ಬದಲಾಯಿಸಿಕೊಳ್ಳಬೇಕಾ? ಹಣೆಯ ಮೇಲೆ ಒಕ್ಕಲಿಗ ಅಂತ ಬರೆದುಕೊಂಡು ಓಡಾಡಲು ಆಗುತ್ತಾ? ಪ್ರತಾಪ್‌ಸಿಂಹಗೆ ಒಕ್ಕಲಿಗರು 10 ವರ್ಷ ಅವಕಾಶ ಕೊಟ್ಟಿದ್ದಾರೆ. ನನಗೂ ಒಂದು ಅವಕಾಶ ಕೊಡಿ ಎಂದು ಕೇಳುವುದು ತಪ್ಪಾ ಎಂದು ಮೈಸೂರು-ಕೊಡಗು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್‌ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.