Mysore
22
broken clouds
Light
Dark

ಭಾರತ ದೇಶವನ್ನು ಇನ್ನಷ್ಟು ಉನ್ನತ ಸ್ಥಾನಕ್ಕೆ ಕೊಂಡೊಯ್ಯ ಬೇಕಾದರೆ ಮೋದಿಯವರ ಕೈ ಬಲ ಪಡಿಸಬೇಕಿದೆ : ಯದುವೀರ್ 

ಮೈಸೂರು : ಭಾರತ ದೇಶವನ್ನು ಇನ್ನಷ್ಟು ಉನ್ನತ ಸ್ಥಾನಕ್ಕೆ ಕೊಂಡೊಯ್ಯ ಬೇಕಾದರೆ ಮೋದಿಯವರ ಕೈ ಬಲ ಪಡಿಸಬೇಕಿದೆ ಎಂದು ಮೈಸೂರು ಮತ್ತು ಕೊಡಗು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಯದುವೀ‌ರ್ ತಿಳಿಸಿದರು.

ಇಂದು ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಗಾಯತ್ರಿಪುರಂ ನಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ರೋಡ್ ಶೋ ಗೆ ಚಾಲನೆ ನೀಡಲಾಯಿತು,

ನರಸಿಂಹರಾಜ ಕ್ಷೇತ್ರಕ್ಕೆ ಒಳಪಡುವ ಸೋಲುಗರ ಬೀದಿ ಅಂಬೇಡ್ಕರ್ ಕಾಲೋನಿ, ಕ್ಯಾತಮಾರನಹಳ್ಳಿ ,ರಾಘವೇಂದ್ರ ನಗರ ಬಡಾವಣೆ,ಗಿರಿಯಾಬೋವಿ ಪಾಳ್ಯ,ಸಿದ್ದಾರ್ಥ ನಗರ,ವಿದ್ಯಾನಗರ,ತ್ರಿವೇಣಿ ವೃತ್ತ,ಆರ್.ಎಂ.ಎಸ್ ಲೇಔಟ್ ,ಶಕ್ತಿನಗರ, ಟೀಚರ್ಸ್ ಕಾಲೋನಿ , ಪಾಪಣ್ಣ ಲೇಔಟ್ , ಯರಗನಹಳ್ಳಿಯ ಟೆರಿಷಿಯನ್ ಕಾಲೇಜು ಸರ್ಕಲ್ ನ ವರೆಗೆ ರೋಡ್ ಶೋ ನಡೆಯಿತು.

ರೋಡ್ ಶೋನಲ್ಲಿ ಯದುವೀರ್ ಅವರು ಕುಂಕುಮ ಬಣ್ಣದ ವಸ್ತ್ರದಲ್ಲಿ ಮಿಂಚಿದರು, ಯದುವೀರ್ ಅವರ ಪೋಟೋ ವನ್ನು ಜನರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಕ್ಲಿಕಿಸಿ ಕೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು,

ಜನರನ್ನು ಉದ್ದೇಶಿಸಿ ಮಾತನಾಡಿದ ಯದುವೀರ್ ಭಾರತ ದೇಶದ ಚುಕ್ಕಾಣಿ ಹಿಡಿದಿರುವ ನರೇಂದ್ರ ಮೋದಿಯವರು ಹತ್ತು ವರ್ಷದಲ್ಲಿ ಸಾಕಷ್ಟು ಅಭಿವೃದ್ಧಿಕೆಲಸಗಳನ್ನು ಮಾಡಿದ್ದಾರೆ, ಆರ್ಥಿಕವಾಗಿ ಕುಸಿತಗೊಂಡಿದ್ದ ದೇಶವನ್ನು ಪ್ರಗತಿಕಾಣುವಂತೆ ಮಾಡಿದ್ದಾರೆ.

ಭಾರತ ದೇಶವನ್ನು ಇನ್ನಷ್ಟು ಉನ್ನತ ಸ್ಥಾನಕ್ಕೆ ಕೊಂಡೊಯ್ಯ ಬೇಕಾದರೆ ಮೋದಿಯವರ ಕೈ ಬಲ ಪಡಿಸಬೇಕಿದೆ , ಮತದಾನ ನಮ್ಮೆಲ್ಲರ ಹಕ್ಕು ಅದನ್ನು ಸದುಪಯೋಗ ಪಡಿಸಿಕೊಂಡು ಈ ಬಾರಿ ಸಮಚಿತ್ತದಿಂದ ಬಿಜೆಪಿಗೆ ಮತ ಚಲಾಯಿಸುವ ಮೂಲಕ ಭಾರತ ದೇಶವನ್ನು ಇತರೆ ದೇಶಗಳಿಗಿಂತ ಮುಂದುವರಿದ ರಾಷ್ಟ್ರವಾಗಿ ಕಟ್ಟೋಣ , ಏಪ್ರಿಲ್ 26 ರಂದು ಎಲ್ಲರೂ ಬಿಜೆಪಿಗೆ ಮತ ನೀಡಿ ನನ್ನ ಕ್ರಮ ಸಂಖ್ಯೆ 1 ಇದಕ್ಕೆ ನಿಮ್ಮ ಅತ್ಯ ಅಮೂಲ್ಯವಾದ ಮತವನ್ನ ನೀಡಿ , ನಿಮ್ಮ ಸೇವೆ ಮಾಡುವ ಅವಕಾಶವನ್ನು ಕಲ್ಪಿಸಿ ಕೊಡಬೇಕೆಂದು ಮನವಿ ಮಾಡಿದರು,

ಇದೆ ಸಂಧರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ ಕೆ.ಆರ್ ಕ್ಷೇತ್ರದ ಮಾಜಿ ಶಾಸಕ ಎಸ್ ಎ ರಾಮದಾಸ್, ಮಾಜಿ ಮೇಯರ್ ಸಂದೆಶ್ ಸ್ವಾಮೀ , ಗಿರಿಧರ್ ಸೇರಿದಂತೆ ಹಲವು ಮುಖಂಡರು ಮತ್ತು ಕಾರ್ಯಕರ್ತರು ಸಾತ್ ನೀಡಿದರು