Mysore
22
haze

Social Media

ಭಾನುವಾರ, 21 ಡಿಸೆಂಬರ್ 2025
Light
Dark

ಮೈಸೂರು: ಮೋದಿ ವಾಸ್ತವ್ಯದ ಹೋಟೆಲ್‌ನ 80 ಲಕ್ಷ ಬಿಲ್‌ ಬಾಕಿ

ಮೈಸೂರು: 2023ರ ಏಪ್ರಿಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಆಗಮಿಸಿದ್ದ ವೇಳೆ ಇಲ್ಲಿನ ಖಾಸಗಿ ಹೋಟೆಲ್‌ ರ್ಯಾಡಿಸನ್‌ ಬ್ಲ್ಯೂ ನಲ್ಲಿ ಆಥಿತ್ಯ ನೀಡಿದ್ದಕ್ಕಾಗಿ ವೆಚ್ಚವಾಗಿ 80.6 ಲಕ್ಷ ಬಾಕಿ ಹಣ ಪಾವತಿಸಬೇಕು. ಇಲ್ಲವಾದಲ್ಲಿ ಕಾನೂನು ಹೋರಾಟ ನಡೆಸಲಾಗುವುದು ಎಂದು ಹೊಟೆಲ್‌ ತಿಳಿಸಿದೆ.

ಈ ಸಂಬಂಧ ಹೋಟೆಲ್‌ ಹಣಕಾಸು ವಿಭಾಗದ ಪ್ರಧಾನ ವ್ಯವಸ್ಥಾಪಕರು ಮೇ.21ರಂದು ಅರಣ್ಯ ಇಲಾಖೆಗೆ ಪತ್ರ ಬರೆದಿದ್ದು, ʼಬಾಕಿಯಿರುವ ಮೊತ್ತವನ್ನು ಜೂನ್‌.1 ಒಳಗಾಗಿ ಆವತಿಸಬೇಕು. ಇಲ್ಲವಾದಲ್ಲಿ ಕಾನೂನಾತ್ಮಕ ಹೋರಾಟ ಮಾಡಲಾಗುವುದು ಎಂದು ತಿಳಿಸಿದೆ.

ಚಾಮರಾಜನಗರ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ 50 ವರ್ಷ ತುಂಬಿದ ಸಂಭ್ರಮದಲ್ಲಿ ಮೈಸೂರಿಗೆ ಪ್ರಧಾನಿ ಮೋದಿ 2023 ರ ಏಪ್ರಿಲ್‌ 9ರಿಂದ 11 ವರೆಗೆ ಆಗಮಿಸಿದ್ದ ವೇಳೆ ಈ ಬಾಕಿ ಬಿಲ್‌ ಪಾವತಿ ಉಳಿದಿದೆ. ಇನ್ನು ಈ ಕಾರ್ಯಕ್ರಮಕೆ ಅಂದಾಜು ಮೊತ್ತವನ್ನಾಗಿ 3 ಕೋಟಿ ರೂ ಎನ್ನಲಾಗಿತ್ತು. ಆದರೆ ಅದು 6.3 ಕೋಟಿಗೆ ತಲುಪಿತು.

ಉಳಿದ 3.3ಕೋಟಿ ರೂಗಳ ಬಾಕಿ ಮೊತ್ತದಲ್ಲಿ ರ್ಯಾಡಿಸನ್‌ ಬ್ಲ್ಯೂನ 80.6 ಲಕ್ಷ ಮೊತ್ತವನ್ನು ಅರಣ್ಯ ಇಲಾಖೆ ಬಾಕಿ ಉಳಿಸಿಕೊಂಡಿದ್ದು, ಅದನ್ನು ಜೂನ್‌. 1ರ ಒಳಗಾಗಿ ಪಾವತಿಸುವಂತೆ ಹೋಟೆಲ್‌ ಪತ್ರದಲ್ಲಿ ತಿಳಿಸಿದೆ.

Tags:
error: Content is protected !!