ಮೈಸೂರು: ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೋಲುವ ಭಯ ಕಾಡುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ವಿರೋಧ ಪಕ್ಷಗಳೆಲ್ಲವೂ ನನ್ನನ್ನು ಸಮಾಧಿ ಮಾಡಲು ಯತ್ನಿಸುತ್ತಿವೆ ಎಂಬ ಮೋದಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಮೋದಿಯನ್ನು ರಾಜಕೀಯವಾಗಿ ಸೋಲಿಸಲು ವಿರೋಧ ಪಕ್ಷಗಳು ಒಂದಾಗಿವೆ. ಇದರಲ್ಲಿ ಸಮಾಧಿ ಮಾಡುವ ಪ್ರಶ್ನೆ ಎಲ್ಲಿದೆ. ಪ್ರಸ್ತುತ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಹಾತಾಶೆಯಾಗಿ ಬಾಯಿಗೆ ಬಂದಂಗೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.
ನರೇಂದ್ರ ಮೋದಿ 10 ವರ್ಷ ದೇಶದ ಪ್ರಧಾನಿಯಾಗಿದ್ರು, ಈ ಅವಧಿಯಲ್ಲಿ ಬಡವರ ಪರವಾಗಿ ಏನು ಕೆಲಸ ಮಾಡಿಲ್ಲ. ಜನರಿಗೆ ಕೊಟ್ಟಿದ್ದ ಭರವಸೆ ಈಡೇರಿಸಿಲ್ಲ. ಆಗಾಗಿ ಅವರೊಬ್ಬ ಸುಳ್ಳಿನ ಸರದಾರ ಎಂದು ವ್ಯಂಗ್ಯವಾಡಿದರು.
ನರೇಂದ್ರ ಮೋದಿ ಆಡಳಿತದಲ್ಲಿ ದೇಶ ಆರ್ಥಿಕವಾಗಿ ಸಬಲವಾಗಿಲ್ಲ. ಶ್ರೀಮಂತರ ಪರವಾಗಿರುವ ಮೋದಿಯನ್ನು ಅಧಿಕಾರದಿಂದ ದೂರ ಇಡುವುದು ಅತ್ಯವಶ್ಯಕ ಎಂದರು.