ಮೈಸೂರು : ಕಳೆದ ಹತ್ತು ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸುಳ್ಳು ಹೇಳೋದು ಬಿಟ್ಟರೆ ಕೊಟ್ಟ ಮಾತನ್ನು ನಡೆಸಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದರು.
ನಗರದಲ್ಲಿ ಮೈಸೂರು-ಕೊಡಗು ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಅವರ ಪರ ಪ್ರಚಾರದ ವೇಳೆ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಹತ್ತು ವರ್ಷದಲ್ಲಿ ನರೇಂದ್ರ ಮೋದಿ ಅವರು ಬರೀ ಸುಳ್ಳು ಭರವಸೆ ನೀಡಿದ್ದಾರೆ ಹೊರತು ಕೊಟ್ಟ ಮಾತನ್ನು ನಡೆಸಿಕೊಟ್ಟಿಲ್ಲ ಎಂದು ಕಿಡಿ ಕಾರಿದರು.
ಬಡವರ, ಮಹಿಳೆಯರ, ರೈತರ, ಯುವಕರ, ದಲಿತ-ಹಿಂದುಳಿದ ಹಾಗೂ ಅಲ್ಪಸಂಖ್ಯಾತ, ಕಾರ್ಮಿಕರ ಸಮಸ್ಯೆಯಾಗಿರಬಹುದು ಯಾವುದನ್ನು ಒಂದು ವಿವಾರಕ್ಕೆ ಪರಿಹಾರ ನೀಡಿಲ್ಲ ಎಂದು ತಿಳಿಸಿದರು.
೨೦೧೫ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಏನು ಹೇಳಿದ್ದರು ಮತ್ತು ೨೦೨೪ರಲ್ಲಿ ಅವರು ಏನು ಮಾಡಿದ್ದಾರೆ ಮತ್ತು ಏನು ಮಾಡಿಲ್ಲ ಎಂದು ಮತದಾರರರಾದ ನೀವು ಪರಿಶೀಲನೆ ಮಾಡಿ ಯಾರಿಗೆ ಅಧಿಕಾರ ನೀಡಬೇಕು, ಯಾಕೆ ನೀಡಬೇಕು ಎಂದು ತೀರ್ಮಾನ ಮಾಡಿ ಎಂದರು.