ಮೈಸೂರು: ಈಗ ನಡೆದಿರುವ ಗಣತಿಯೇ ವೈಜ್ಞಾನಿಕವಾಗಿದೆ. ಹೀಗಾಗಿ ಮರು ಜಾತಿಗಣತಿ ಅನಗತ್ಯ ಎಂದು ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಅವರು ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿಗಣತಿ ಬಗ್ಗೆ ಸುಖ ಸಮ್ಮನೆ ವಿರೋಧ ಮಾಡುವುದು ಸರಿಯಲ್ಲ. ಕೆಲವರು ಪೂರ್ವಗ್ರಹ ಪೀಡಿತರಾಗಿ ವಿರೋಧ ಮಾಡುವುದು ಸರಿಯಲ್ಲ. ಇದು ವೈಜ್ಞಾನಿಕವಾಗಿಯೇ ಇದೆ ಎಂದರು.
ಯಾರೂ ಭಯಪಡುವ ಅಗತ್ಯ ಇಲ್ಲ
ಜಾತಿ ಗಣತಿಯಿಂದ ಕೆಲವರು ನಮ್ಮ ಸಂಖ್ಯೆಯಲ್ಲಿ ಕಡಿಮೆ ಆಗಿದೆ ಎಂದು ವಿರೋಧ ಮಾಡುತ್ತಿದ್ದಾರೆ. ಈಗಾಗಲೇ 2011-12 ರ ಗಣತಿ ಪ್ರಕಾರ ರಾಜ್ಯದಲ್ಲಿ ಎಸ್ಪಿ ಎಸ್ಟಿ, ಅಲ್ಪಸಂಖ್ಯಾತ ಜನ ಸಂಖ್ಯೆಗೆ ಹೋಲಿಸಿದರೆ ಸರಿಯಾಗಿ ಇದೆ.
ಯಾರೂ ಕೂಡ ಭಯಪಡಿವ ಅಗತ್ಯ ಇಲ್ಲ ಎಂದರು.
ಇದನ್ನೂ ಓದಿ:- ಪ್ರತಾಪ್ ಸಿಂಹಗೆ ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಟಾಂಗ್
ಇನ್ನೂ ಸಿಇಟಿ ಪರೀಕ್ಷಾ ಸಂಧರ್ಭದಲ್ಲಿ ವಿದ್ಯಾರ್ಥಿಗಳಿಗೆ ಜನಿವಾರ ತೆಗೆಸಿದ ವಿಚಾರವಾಗಿ ಪ್ರತಿಕ್ರಿಯಿಸಿ, ಜನಿವಾರ ಹಾಗೂ ಹಿಜಾಬ್ ಘಟನೆಯಲ್ಲೂ ನಮ್ಮ ನಿಲುವು ಒಂದೇ ಜನಿವಾರ ತಗೆಸಿದರ ಮೇಲೆ ಈಗಾಗಲೇ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.
ಇದರಲ್ಲಿ ಬಿಜೆಪಿ ರಾಜಕೀಯ ಮಾಡುವ ಅವಶ್ಯಕತೆ ಇಲ್ಲ. ಈ ಹಿಂದೆ ಹಿಜಾಬ್ ತೆಗೆಸುವ ವಿಚಾರಲ್ಲಿ ಬಿಜೆಪಿ ಮಾಡಿದ ತಪ್ಪು ಒಪ್ಪಿಕೊಳ್ಳಲಿಲ್ಲ. ತಾವು ಮಾಡಿದ್ದೆ ಸರಿ ಅಂತ ಹೇಳಿತ್ತು. ಜನಿವಾರ ತೆಗೆಸಿದನ್ನು ನಾವು ಖಂಡಿಸಿದ್ದೇವೆ
ಎಂದು ಹೇಳಿದರು.





