Mysore
16
few clouds

Social Media

ಬುಧವಾರ, 17 ಡಿಸೆಂಬರ್ 2025
Light
Dark

ವಿಧಾನ ಪರಿಷತ್‌ ಚುನಾವಣೆ: ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ವಿವೇಕಾನಂದಗೆ ಗೆಲುವು

ಮೈಸೂರು: ವಿಧಾನಪರಿಷತ್‌ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತಎಣಿಕೆ ಇಂದು ( ಜೂನ್‌ 6 ) ನಡೆದಿದ್ದು, ಜೆಡಿಎಸ್‌ – ಬಿಜೆಪಿ ಮೈತ್ರಿ ಅಭ್ಯರ್ಥಿ ಕೆ. ವಿವೇಕಾನಂದ 4622 ಮತಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಜೆಡಿಎಸ್‌ನ ಕೆ. ವಿವೇಕಾನಂದ 10823 ಮತಗಳನ್ನು ಪಡೆದರೆ, ಕಾಂಗ್ರೆಸ್‌ನ ಮರಿತಿಬ್ಬೇಗೌಡ 6201 ಮತಗಳನ್ನು ಪಡೆದುಕೊಂಡಿದ್ದಾರೆ. ಇನ್ನುಳಿದಂತೆ ಹ.ರಾ. ಮಹೇಶ್‌ 492, ನಾಗಮಲ್ಲೇಶ್‌ 256 ಮತಗಳನ್ನು ಪಡೆದಿದ್ದಾರೆ. ಒಟ್ಟು 1046 ಮತಗಳನ್ನು ಕುಲಗೆಟ್ಟ ಮತಗಳಾಗಿವೆ.

ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಹಾಸನ ಜಿಲ್ಲೆಗಳನ್ನೊಳಗೊಂಡ ದಕ್ಷಿಣ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಯ 44 ಮತಗಟ್ಟೆಗಳಲ್ಲಿ ಸೋಮವಾರ ( ಜೂನ್‌ 3 ) ಮತದಾನ ನಡೆದಿತ್ತು.

Tags:
error: Content is protected !!