ಮೈಸೂರು : ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆಯ ಎನ್.ಡಿ.ಯೆ. ಅಭ್ಯರ್ಥಿಯಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರ ಪರವಾಗಿ ಕೃಷ್ಣರಾಜ ಕ್ಷೇತ್ರದ ಶಾಸಕರಾದ ಟಿಎಸ್. ಶ್ರೀವತ್ಸ ರವರು ಕೃಷ್ಣಮೂರ್ತಿಪುರಂ ಬಡಾವಣೆಯಲ್ಲಿ ಮನೆಮನೆಗೆ ತೆರಳಿ ಪಾದಯತ್ರೆಯಲ್ಲಿ ಮತಯಾಚನೆ ಮಾಡಿದರು.
ಇದೇ ಸಂಧರ್ಭದಲ್ಲಿ ಕೃಷ್ಣರಾಜ ಕ್ಷೇತ್ರದ ಶಾಸಕರಾದ ಟಿ.ಎಸ್. ಶ್ರೀವತ್ಸ ರವರು ಮಾತನಾಡಿ ದೇಶಕ್ಕಾಗಿ ಮೋದಿ ಮೈಸೂರು ಗೆ ಯದುವೀರ್ ಎನ್ನುವ ಘೋಷಣೆ ಸಾಮನ್ಯ ನಾಗರೀಕರಲ್ಲಿ ಕೇಳಿಬರುತ್ತಿರುವುದು ಸಂತಸ ತರುತ್ತಿದೆ ಎಂದರು.
ನಾಳೆ ಸಂಜೆ ಪ್ರಧಾನಿ ಮೋದಿ ರವರು ಮಹರಾಜ ಕಾಲೇಜು ಮೈದಾನಕ್ಕೆ ಆಗಮಿಸುತ್ತಿದ್ದು, ಭಾಷಣ ಆಲಿಸಲು ಜನಸಾಮನ್ಯರಿಗೆ ಆಹ್ವಾನಿಸಿದರು, ಹಳೇ ಮೈಸೂರು ಭಾಗದಲ್ಲಿ ಶಿಕ್ಷಣ, ಆರೋಗ್ಯ, ಕೃಷಿ, ಕಾರ್ಖಾನೆ, ಅಣೆಕಟ್ಟು, ಸಾಂಸ್ಕೃತಿಕ ಕಲೆ ಸಾಹಿತ್ಯ ಸೇರಿದಂತೆ ಸಮಗ್ರವಾಗಿ ಅಭಿವೃದ್ಧಿ ಪಡಿಸಿದ ಯದುಕುಲದ ಕುಡಿ ಮೈಸೂರು ಕೊಡಗು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರಿಗೆ ಕೃಷ್ಣರಾಜ ಕ್ಷೇತ್ರದಿಂದ ಅತಿ ಹೆಚ್ಚು ಮತಗಳ ಮುನ್ನಡೆ ನೀಡಿ ಜಯಗೊಳಿಸಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.
ಈ ಸಂಧರ್ಭದಲ್ಲಿ ವಿಶ್ವೇಶ್ವರಯ್ಯ,ನಾಗರಾಜ್ ಬಿಲ್ಲಯ್ಯ, ಕೃಷ್ಣ, ರವಿ, ಅರುಣ್, ಸೋಮು ,ದೀಪು, ಕೃಷ್ಣ, ಸುಂದರ್, ಅಜಯ್ ಶಾಸ್ತ್ರಿ, ಜೋಗಿ ಮಂಜು, ಓಂ ಶ್ರೀನಿವಾಸ್, ಪ್ರಹ್ಲಾದ್, ಬಸವರಾಜ್, ಮಮತ, ಮುರುಳಿ, ಮಧು, ರಾಜಗೋಪಾಲ್,ಚಂದ್ರಪ್ಪ,ಕಿಶೋರ್, ಪ್ರದೀಪ್, ರಘು, ಮಂಜುನಾಥ್ , ಮುಂತಾದವರು ಇದ್ದರು.