Mysore
23
clear sky

Social Media

ಗುರುವಾರ, 05 ಫೆಬ್ರವರಿ 2026
Light
Dark

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದ ಶಾಸಕ ಜಿ.ಡಿ.ಹರೀಶ್‌ ಗೌಡ

ಹುಣಸೂರು: ಬಹಳಷ್ಟು ವರ್ಷಗಳಿಂದ ನೆನೆಗುದಿಗೆ ಬಿದ್ದಿದ ರಸ್ತೆ ಅಭಿವೃದ್ದಿ ಕಾರ್ಯಗಳಿಗೆ ಸರ್ಕಾರದಿಂದ ವಿಶೇಷ ಅನುದಾನ ತರುವ ಮೂಲಕ ತಾಲೂಕಿನ ಸಮಗ್ರ ಅಭಿವೃದ್ದಿಗಾಗಿ ಸರ್ಕಾರಕ್ಕೆ ಮನವಿ ಅನುದಾನ ತರಲಾಗುತ್ತಿದೆ. ಗುಣಮಟ್ಟ ಕಾಪಾಡುವ ನಿಟ್ಟಿನಲ್ಲಿ ಸಾರ್ವಜನಿಕರು ಗಮನಹರಿಸಬೇಕಿದೆ ಎಂದು ಶಾಸಕ ಜಿ.ಡಿ.ಹರೀಶ್ ಗೌಡ ಹೇಳಿದರು.

ತಾಲೂಕಿನ ಬಿಳಿಕೆರೆ ಹೋಬಳಿ ವ್ಯಾಪ್ತಿಯಲ್ಲಿ ಗುರುವಾರ ೧೩.೫೦ ಕೋಟಿ ರೂ.ಗಳ ವೆಚ್ಚದಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ನಂತರ ತೆಂಕಲಕೊಪ್ಪಲು ಗ್ರಾಮದ ಗುರುಮಠ ಆವರಣದಲ್ಲಿ ಆಯೋಜನೆಗೊಂಡಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಹಲವು ಗ್ಯಾರಂಟಿ ಯೋಜನೆಗಳ ನಡುವೆಯೂ ತಾಲೂಕಿನಲ್ಲಿ ಅಭಿವೃದ್ಧಿ ಕಾಮಗಾರಿಗಳು ಅಭಾಧಿತವಾಗಿ ನಡೆಯುವಂತೆ ಪ್ರತಿದಿನ ಸರ್ಕಾರದ ವಿವಿದ ಇಲಾಖೆಗಳ ಸಚಿವರನ್ನು ಭೇಟಿಯಾಗಿ ಅನುದಾನ ತರುತ್ತಿದ್ದೇನೆ.

ತಾಲೂಕಿನಲ್ಲಿ ಶಾಸಕರಿಂದ ಅನುದಾನ ತರಲು ಸಾಧ್ಯವಿಲ್ಲ ಎನ್ನುವ ಚರ್ಚೆಗಳು ನಡೆಯುತ್ತಿರುವುದನ್ನು ಬಲ್ಲೆ. ಆದರೆ ನನ್ನನ್ನು ಆರಿಸಿ ಶಾಸಕನನ್ನಾಗಿಸಿರುವ ಜನರ ಒಳಿತಿಗಾಗಿ ನಾನು ಅವಿರತ ಶ್ರಮಿಸುತ್ತಿದ್ದೇನೆ. ಮುಂದೆಯೂ ಶ್ರಮಿಸುತ್ತೇನೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಯಿಂದ ಆರಂಭಗೊಂಡು, ಲೋಕೋಪಯೋಗಿ, ನೀರಾವರಿ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಚಿವರನ್ನು ಸತತ ಭೇಟಿಯಾಗುತ್ತಲೇ ತಾಲೂಕಿನ ಸಮಸ್ಯೆಗಳ ಕುರಿತು ಮಾಹಿತಿ ನೀಡಿ ಅನುದಾನ ಪಡೆಯುತ್ತಿದ್ದೇನೆ ಎಂದರು.

ಎಲ್ಲೆಲ್ಲಿ ಏನೇನು ಭೂಮಿ ಪೂಜೆ:
ತೆಂಕಲಕೊಪ್ಪಲು ಗ್ರಾಮದಲ್ಲಿ ೧೦ ಕೋಟಿ ರೂ.ವೆಚ್ಚದಡಿ ೩.೯೨ ಕಿ.ಮೀ.ಉದ್ದದ ತೆಂಕಲಕೊಪ್ಪಲು_ಚೋಳೇನಹಳ್ಳಿ-ಬೋಳನಹಳ್ಳಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು. ಹುಸೇನ್‌ಪುರ, ಶಿರಿಯೂರು ಮತ್ತು ರಾಯನಹಳ್ಳಿ ನಾಲೆಗಳ ಅಭಿವೃದ್ಧಿಗಾಗಿ ತಲಾ ೧ ಕೋಟಿ ರೂ.ಗಳ ವೆಚ್ಚದಡಿ(ಒಟ್ಟು ೩ ಕೋಟಿ ರೂ.ಗಳು) ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು. ೮.೪೦ ಲಕ್ಷ ರೂ.ವೆಚ್ಚದಡಿ ತೆಂಕಲಕೊಪ್ಪಲು ಗ್ರಾಮದಲ್ಲಿ ಗ್ರಾ.ಪಂ. ಸುಪರ್ದಿಯ ೨ ಮಾರಾಟ ಮಳಿಗೆಗಳು ಮತ್ತು ಕೊಮ್ಮೇಗೌಡನಕೊಪ್ಪಲು ಗ್ರಾಮದಲ್ಲಿ ಒಂದು ಮಾರಾಟ ಮಳಿಗೆಯನ್ನು ಉದ್ಘಾಟಿಸಿದರು. ಅಲ್ಲದೇ ಹುಸೇನ್‌ಪುರ ಮತ್ತು ತೆಂಕಲಕೊಪ್ಪಲು ಗ್ರಾಮದಲ್ಲಿ ತಲಾ ೮ ಲಕ್ಷ ರೂ.ವೆಚ್ಚದಡಿ ನಿರ್ಮಾಣಗೊಂಡ ಅಂಗನವಾಡಿ ಕೇಂದ್ರವನ್ನು ಉದ್ಘಾಟಿಸಿದರು.

 

Tags:
error: Content is protected !!