Mysore
13
scattered clouds

Social Media

ಸೋಮವಾರ, 22 ಡಿಸೆಂಬರ್ 2025
Light
Dark

ಯಂತ್ರೋಪಕರಣ ಬಳಸಿ ಉತ್ತಮ ಬೆಳೆ ಬೆಳೆಯಲು ರೈತರಲ್ಲಿ ಶಾಸಕ ಜಿಟಿಡಿ ಕರೆ

ಮೈಸೂರು: ರೈತರು ಸರ್ಕಾರದ ಸಹಾಯಧನದಡಿಯಲ್ಲಿ ಯಂತ್ರೋಪಕರಣಗಳನ್ನು ಬಳಸಿಕೊಂಡು ಉತ್ತಮ ಬೆಳೆ ಬೆಳೆಯ ಬೇಕೆಂದು ಶಾಸಕ ಜಿಟಿ ದೇವೇಗೌಡ ರೈತರಲ್ಲಿ ಕರೆ ನೀಡಿದರು.

ಅವರು ಇಂದು ಮೈಸೂರಿನ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಛೇರಿಯಲ್ಲಿ ರೈತರಿಗೆ ಚಾಫ್ ಕಟರ್, ಪವರಿ ಟಿಲ್ಲರ್, ರೋಟವೇಟರ್‌ಗಳನ್ನು ವಿತರಿಸಿ ಮಾತನಾಡಿದರು.

ಕರ್ನಾಟಕ ರೈತ ಸುರಕ್ಷ ಪ್ರಧಾನ ಮಂತ್ರಿ ಫಸಲ್ ಬೀಮಾ (ವಿಮಾ) ಯೋಜನೆಯಡಿ ಬೆಳೆ ವಿಮೆಗೆ ನೊಂದಾಣಿ ಪ್ರಾರಂಭವಾಗಿದ್ದು, ರೈತರು ಬೆಳೆ ವಿಮೆಗೆ ನೊಂದಾಯಿಸಿಕೊಳ್ಳಬೇಕು, ಪ್ರಕೃತಿ ವಿಕೋಪ ಹಾಗೂ ಕೀಟರೋಗ ಬಾಧೆಯಿಂದ ಬೆಳೆ ನಷ್ಟ ಸಂಭವಿಸಿದರೆ ರೈತರಿಗೆ ಸಿಗಲಿದೆ ಎಂದು ಜಿಟಿಡಿ ತಿಳಿಸಿದರು.

ಕೃಷಿ ಭಾಗ್ಯ ಯೋಜನೆಯಡಿ ಬದು ನಿರ್ಮಾಣ, ಕೃಷಿ ಹೊಂಡ ನಿರ್ಮಾಣ, ಕೃಷಿ ಹೊಂಡದ ಸುತ್ತಲು ತಂತಿ ಬೇಲಿ ನಿರ್ಮಾಣ ಹಾಗೂ ಹಲವಾರು ಸೌಲಭ್ಯಗಳಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.

ಕೃಷಿ ಇಲಾಖೆಯ ಕಾರ್ಯಕ್ರಮಗಳನ್ನು ಕುರಿತು ಸಹಾಯಕ ಕೃಷಿ ನಿರ್ದೇಶಕರಾದ ಬಿ.ಡಿ.ಜಯರಾಂ ರೈತರಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಗೋಪಾಲಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಜಿ.ಕೆ.ಬಸವೇಗೌಡ, ಸ್ವಾಮಿಗೌಡ, ಮಹೇಶ್, ದೇವೇಗೌಡ, ರಾಮಲಿಂಗ, ಸಣ್ಣಹೈದೇಗೌಡ, ತುಳಸಮ್ಮ, ಚಿಕ್ಕಣ್ಣನಾಯಕ ಹಾಗೂ ಹಲವಾರು ಮುಖಂಡರು ಭಾಗವಹಿಸಿದ್ದರು.

Tags:
error: Content is protected !!