Mysore
33
scattered clouds

Social Media

ಸೋಮವಾರ, 30 ಮಾರ್ಚ್ 2026
Light
Dark

ಮಕ್ಕಳಿಗೆ ಜಂತುಹುಳು ಮಾತ್ರೆ ನೀಡಿದ ಶಾಸಕ ಅನಿಲ್ ಚಿಕ್ಕಮಾದು

ಎಚ್.ಡಿ.ಕೋಟೆ: ಮಾದಾಪುರ ಗ್ರಾಮದ ಚಂದ್ರಮೌಳೇಶ್ವರ ಮಲ್ಲಿಕಾರ್ಜುನ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದ ಪ್ರಯುಕ್ತ ಅರಣ್ಯ ಮತ್ತು ವಿಹಾರ ಧಾಮದ ಅಧ್ಯಕ್ಷರು ಹಾಗೂ ಶಾಸಕ ಅನಿಲ್ ಚಿಕ್ಕಮಾದು ರವರು ಮಕ್ಕಳಿಗೆ ಜಂತುಹುಳು ಮಾತ್ರೆ ನೀಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು 1 ರಿಂದ 19 ವರ್ಷದ ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆ ನೀಡಲಾಗುತ್ತಿದೆ. ನಮ್ಮ ತಾಲ್ಲೂಕಿನ ಅಂಗನವಾಡಿ ಮತ್ತು ಎಲ್ಲಾ ಶಾಲೆಯ ಮಕ್ಕಳಿಗೂ ಕಡ್ಡಾಯವಾಗಿ ಮಾತ್ರೆಯನ್ನು ನೀಡಿ ನೂರಕ್ಕೆ ನೂರರಷ್ಟು ಪ್ರಗತಿ ಸಾಧಿಸಬೇಕು ಎಂದು ತಿಳಿಸಿದರು.

ನಂತರ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಟಿ ರವಿಕುಮಾರ್ ಮಾತನಾಡಿ, ಈ ದಿನ ರಾಜ್ಯಾದ್ಯಂತ ರಾಷ್ಟ್ರೀಯ ಜಂತು ಹುಳು ನಿವಾರಣ ದಿನ ಕಾರ್ಯಕ್ರಮವನ್ನು ಮಾಡುತ್ತಿದ್ದೇವೆ. ಎಚ್ ಡಿ ಕೋಟೆ ತಾಲ್ಲೂಕಿನಲ್ಲಿ ಒಟ್ಟು 252 ಅಂಗನವಾಡಿಗಳಲ್ಲಿ 7355 ಮಕ್ಕಳು, 151 ಶಾಲೆಗಳಲ್ಲಿ 21,735 ಮಕ್ಕಳುಗಳಿದ್ದು ಎಲ್ಲಾ ಮಕ್ಕಳಿಗೂ ಕಡ್ಡಾಯವಾಗಿ ಜಂತುಹುಳು ನಿವಾರಣ ಮಾತ್ರೆಯನ್ನು ನೀಡುತ್ತಿದ್ದೇವೆ. ಇದೇ ತಿಂಗಳ 16ರಂದು ಮಾಪಾ ಆಫ್ ಡೇ ಎಂದು ಮಾಡಿ ಈ ದಿನ ಬಿಟ್ಟು ಹೋಗಿರೋ ಮಕ್ಕಳಿಗೆ ದಿನಾಂಕ 16 ರಂದು ನೀಡುತ್ತೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿನಗರ ಸಭೆ ಸದಸ್ಯರಾದ ಪ್ರದೀಪ್ ಕುಮಾರ್. ಗ್ರಾಪಂ ಮಜಿ ಅಧ್ಯಕ್ಷ ಮಹೇಶ್, ಊರಿನ ಮುಖಂಡರಾದ ಮಂಚ್ಚಯ್ಯ, ಮಾಜಿ ಅಧ್ಯಕ್ಷ ದಿನೇಶ್, ವೈದ್ಯಾಧಿಕಾರಿ ಡಾ.ಚಂದ್ರಕಲಾ, ಸಿಬ್ಬಂದಿ ವರ್ಗದವರಾದ ರವಿರಾಜ್, ದೊರೆ, ಜಯಂತಿ, ಶಶಿಕಲಾ, ಗ್ರಾಮದ ಮುಖಂಡರು, ಮಕ್ಕಳು, ಇನ್ನಿತರರು ಹಾಜರಿದ್ದರು.

Tags:
error: Content is protected !!