Mysore
20
broken clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಮೀರ್‌ ಸಾಧಿಕ್‌ ರಾಜಕಾರಣಕ್ಕೆ ಹೆಸರಾದ ಸಿದ್ದರಾಮಯ್ಯ : ಶ್ರೀರಾಮುಲು ಕಿಡಿ

ಮೈಸೂರು: ದಲಿತ, ಹಿಂದುಳಿದ ವರ್ಗಗಳ ನಾಯಕರನ್ನು ವ್ಯವಸ್ಥಿತವಾಗಿ ತುಳಿದುಕೊಂಡು ಬಂದಿರುವ ಸಿದ್ದರಾಮಯ್ಯ ಸಾಮಾಜಿಕ ನ್ಯಾಯದ ಬದಲಿಗೆ ಅನ್ಯಾಯ ಮಾಡುವ ಮೀರ್ಸಾದಿಕ್ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಟೀಕಿಸಿದರು.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹಿಂದುಳಿದ ವರ್ಗಗಳ ನಾಯಕರ ಬಗ್ಗೆ ಅಸೂಯೆ ಇಟ್ಟುಕೊಂಡು ಬಂದಿರುವ ಸಿದ್ದರಾಮಯ್ಯ  ನನ್ನನ್ನು ದಡ್ಡ,ಪೆದ್ದನೆಂದು ಹೇಳಿದ್ದಾರೆ. ಅವರ ಮಾತುಗಳಿಗೆ ಏನು ಹೇಳಬೇಕು, ಯಾವ ಪ್ರತಿಕ್ರಿಯೆ ನೀಡಬೇಕು ಎಂಬುದು ಗೊತ್ತಾಗುತ್ತಿಲ್ಲ.

ಸಿದ್ದರಾಮಯ್ಯ ಅವಕಾಶವಾದಿ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಎಂ.ಮಲ್ಲಿಕಾರ್ಜುನ ಖರ್ಗೆ,  ಡಾ.ಜಿ.ಪರಮೇಶ್ವರ್, ವಿ.ಶ್ರೀನಿವಾಸ ಪ್ರಸಾದ್, ಎ.ಎಚ್.ವಿಶ್ವನಾಥ್ ಸೇರಿದಂತೆ ಅನೇಕ ನಾಯಕರನ್ನು ತುಳಿದಿದ್ದಾರೆ. ಯಾವಾಗಲೂ  ಮೀರ್‌ ಸಾಧಿಕ್‌  ರೀತಿಯಲ್ಲಿ ನಡೆದುಕೊಂಡು ಬಂದಿರುವುದು ನಾಡಿನ ಜನರಿಗೆ ಗೊತ್ತಿದೆ ಎಂದು ಕಿಡಿಕಾರಿದರು.

ರಾಯಚೂರು ಜಿಲ್ಲೆಗೆ ರಾಹುಲ್‌ ಗಾಂಧಿ ಅವರು ಭಾರತ್ ಜೋಡೋ ಯಾತ್ರೆಗೆ ಬಂದ ಸಮಯದಲ್ಲಿ ಗೊಲ್ಲ ಸಮುದಾಯದವರು ಭೇಟಿ ಮಾಡಲು ಬಂದಾಗ ಅವರಿಗೆ ಅವಕಾಶ ನೀಡದೆ ದೂರ ಉಳಿಸುವ ಕೆಲಸ ಮಾಡಿದರು. ಹಿಂದುಳಿದ ವರ್ಗಗಳಿಗೆ ನ್ಯಾಯ ಕೊಡಿಸಲು ಸಾಧ್ಯವಾಗದ ಅವರು ಈಗ ಬೊಬ್ಬೆ ಮಾತನಾಡಿಕೊಂಡು ಕಾಲ ಕಳೆಯುತ್ತಿದ್ದಾರೆ ಎಂದರು.

ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಇತರೆ ಜಾತಿಗಳನ್ನು ಸೇರಿಸುವ ಅಥವಾ ಒಳ ಮೀಸಲಾತಿ ನೀಡುವ ವಿಚಾರದಲ್ಲಿ ಕುಲಶಾಸ್ತ್ರೀ  ಅಧ್ಯಾಯನ  ನಡೆಸಿ ವರದಿ ಪಡೆದುಕೊಂಡು ಮುಂದಿನ ದಿನಗಳಲ್ಲಿ ಕ್ರಮಗಳನ್ನು ಕೈಗೊಳ್ಳಲಿದೆ. ತಲತಲಾಂತರದಿಂದ ಸಾಮಾಜಿಕವಾಗಿ, ಆರ್ಥಿಕವಾಗಿ, ಹಿಂದುಳಿದ ಸಮಾಜಕ್ಕೆ ನ್ಯಾಯ ಒದಗಿಸಬೇಕು ಎನ್ನುವುದು ಸರ್ಕಾರದ ಉದ್ದೇಶ.

 ಹಲವಾರು ಜಾತಿಗಳು ಎಸ್ಸಿ ಎಸ್ಟಿ ವರ್ಗಕ್ಕೆ ಕೆಲವು ಜಾತಿಗಳನ್ನು ಸೇರಿಸಬೇಕು ಎನ್ನುವ ಒತ್ತಡ ಬಂದಿದೆ. ಆದರೆ,   ಕುಲಶಾಸ್ತ್ರೀ ವರದಿ ಬರುವ ತನಕವೂ ಯಾವುದೇ ತೀರ್ಮಾನ ಮಾಡಲಾಗದು. ಯಾವುದೇ ಬೇಡಿಕೆ ಇಟ್ಟರೂ ಅದನ್ನು ಏಕಾಏಕೀ ತೀರ್ಮಾನ   ಮಾಡಲಾಗದು.ಬೇರೆ ಜಾತಿಗಳನ್ನು ಎಸ್ಸಿ-ಎಸ್ಟಿಗೆ ಸೇರಿಸಬೇಡಿ ಎಂಬುದನ್ನು ನಾನು ಹೇಳಲ್ಲ ಎಂದು ಹೇಳಿದರು. ಒಳ ಮೀಸಲಾತಿ ವಿಚಾರದಲ್ಲಿ ಸರ್ಕಾರ ಯಾವುದೇ ತೀರ್ಮಾನ ಮಾಡುವುದಿಲ್ಲ. ಮೊದಲು ಕುಲಶಾಸ್ತ್ರೀಯ ಅಧ್ಯಯನ ವರದಿ ಬರಬೇಕು. ನಂತರ,ಅದರ ಬಗ್ಗೆ ಚರ್ಚಿಸಿ ತೀರ್ಮಾನಮಾಡುತ್ತೇವೆ ಎಂದರು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮಹರ್ಷಿ ವಾಲ್ಮೀಕಿ ಜಯಂತಿ,ಸರ್ಕಾರಿ ರಜಾ ದಿನವನ್ನಾಗಿ ಘೋಷಣೆ ಮಾಡುವ ಜೊತೆಗೆ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವಾಲಯ ಸ್ಥಾಪನೆ ಮಾಡಲಾಯಿತು ಎಂದು ತಿಳಿಸಿದರು. ಹಲವು ದಶಕಗಳ ಬೇಡಿಕೆಗಳಾದ  ಪರಿವಾರ ತಳವಾರ ಪದಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಜೊತೆಗೆ ಶೇ.3ರಿಂದ ಶೇ.7ಕ್ಕೆ ಮೀಸಲಾತಿ ಹೆಚ್ಚಿಸಿರುವುದು ರಾಜಕೀಯದ ಐತಿಹಾಸಿಕವಾದ ತೀರ್ವಾನವಾಗಿದೆ.

 ಹಿಂದುಳಿದ ವರ್ಗಗಳ ನಾಯಕರೆಂದು ಬೊಬ್ಬೆ ಹೊಡೆದು ಕಾಲಾಹರಣ ಮಾಡದೇ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿದ ಮುಖ್ಯಮಂತ್ರಿ ಬಸವರಾಜ ಬೊವ್ಮಾಯಿ ಅವರದ್ದು ಐತಿಹಾಸಿಕ ನಿಲುವಾಗಿದೆ. ಎಂದರು. ಮೀಸಲಾತಿ ಹೆಚ್ಚಳ ಮಾಡುವ ಕುರಿತು ಸಿದ್ದರಾಮಯ್ಯ ಸರ್ಕಾರ ನ್ಯಾ ಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಅವರ ಏಕ ಸದಸ್ಯ ಅಯೋಗವನ್ನು ರಚಿಸಿದ್ದು ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ. ಇದನ್ನು ಬಿ.ಎಸ್.ಯಡಿಯೂರಪ್ಪ  ಮುಂದುವರಿಸಿದರು.

ಕುಲ ಶಾಸ್ತ್ರೀಯ ವರದಿ ಜಾರಿಗೊಳಿಸುವ ತೀರ್ಮಾನ ಮಾಡಿದ್ದು ಬಸವರಾಜ ಬೊಮ್ಮಾಯಿ ಸರ್ಕಾರವಾಗಿದೆ ಎಂಬುದನ್ನು ಅರಿಯಬೇಕು ಎಂದು ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು.  ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ  ಸಿದ್ದರಾಜು, ಮಹಾಪೌರ ಶಿವಕುವಾರ್, ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ ಮಾಜಿ ಅಧ್ಯಕ್ಷ ಎಂ.ಅಪ್ಪಣ್ಣ ಹಾಜರಿದ್ದರು.

 

ಕಾಂಗ್ರೆಸ್ಸಿನಿಂದ ಹಿಂದುಳಿದ ವರ್ಗಗಳಿಗೆ ನ್ಯಾಯ ಸಿಕ್ಕಿಲ್ಲ, ಸಿಗುವುದೂ ಇಲ್ಲ. ಇತ್ತೀಚೆಗೆ ಭಾರತ್ ಜೋಡೋ ಯಾತ್ರೆ ವೇಳೆ ಕಾಡುಗೊಲ್ಲ ಸಮುದಾಯಕ್ಕೆ  ಅಪಮಾನ ಮಾಡಲಾಗಿದೆ. ರಾಹುಲ್ ಗಾಂಧಿ ಭೇಟಿ ಮಾಡಿ, ಸಂವಾದಕ್ಕೆ ಮುಂದಾಗಿದ್ದ ಕಾಡುಗೊಲ್ಲರಿಗೆ ತಡೆೊಂಡ್ಡಲಾಗಿದೆ. ಕಾಡುಗೊಲ್ಲರು ರಾಹುಲ್ ಗಾಂಧಿಯನ್ನು  ಭೇಟಿ ಮಾಡಲು ಅಡ್ಡಿಪಡಿಸಲಾಗಿದೆ. ಇದು ಕಾಂಗ್ರೆಸ್ಸಿನ ಹಿಂದುಳಿದ ವರ್ಗಗಳ ವಿರೋಧಿತನಕ್ಕೆ ಸಾಕ್ಷಿಯಾಗಿದೆ..

 

-ಬಿ.ಶ್ರೀರಾಮುಲು, ಸಚಿವರು

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ