Mysore
26
broken clouds

Social Media

ಮಂಗಳವಾರ, 31 ಮಾರ್ಚ್ 2026
Light
Dark

ಸಿಎಂ ಬದಲಾವಣೆ ವಿಚಾರ : ಎಂ.ಬಿ ಪಾಟೀಲ್‌ ಹೇಳಿದ್ದೇನು?

ಮೈಸೂರು : ರಾಜ್ಯ ಕಾಂಗ್ರೆಸ್‌ ಸರ್ಕಾರ ಎರಡು ವರ್ಷದ ಆಡಳಿತವನ್ನು ಯಶಸ್ವಿಯಾಗಿ ಪೂರೈಸಿದೆ. ಈ ಮಧ್ಯೆ ಸಿಎಂ ಅಧಿಕಾರಿ ಹಂಚಿಕೆ ವಿಚಾರ ಆಗಾಗ್ಗೆ ಭುಗಿಲೇಳುತ್ತಲೇ ಇದೆ. ಸದ್ಯ ಈ ವಿಚಾರವಾಗಿ ಬುಧವಾರ ಸಚಿವ ಎಂ.ಬಿ ಪಾಟೀಲ್‌ ಮಾತನಾಡಿ, ಸಿಎಂ ಸಿದ್ದರಾಮಯ್ಯ ಪರ ಬ್ಯಾಟ್‌ ಬೀಸಿದ್ದಾರೆ.

ಸುದ್ದಿಗಾರರು ನವೆಂಬರ್‌ನಲ್ಲಿ ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಕೇಳಿದಾಗ ಪ್ರತಿಕ್ರಿಯಿಸಿದ ಸಚಿವರು, ಐದು ವರ್ಷ ಸಿದ್ದರಾಮಯ್ಯ ಅವರೆ ಸಿಎಂ ಆಗಿರುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಪರ ಬ್ಯಾಟ್‌ ಬೀಸಿದ್ದಾರೆ.

ಸದ್ಯ ಸಿಎಂ ಖುರ್ಚಿ ಖಾಲಿ ಇಲ್ಲ. ಖಾಲಿ ಇದ್ರೆ ಆ ಚರ್ಚೆ ಮಾಡೋದು ಸೂಕ್ತ. ನಾನು ಕೂಡ ಸಿಎಂ ರೇಸ್ ನಲ್ಲಿ ಇಲ್ಲ ಎಂದಿದ್ದಾರೆ.

ಬಿಜೆಪಿ ಅಲ್ಲೇ 20 ಗುಂಪಿದೆ. ಅವರಿಂದ ನಾವು ಪಾಠ ಕಲಿಯುವ ಅಗತ್ಯವಿಲ್ಲ. ಮೊದಲು ಅವರ ಸಮಸ್ಯೆ ಸರಿಪಡಿಸಿಕೊಳ್ಳಲಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Tags:
error: Content is protected !!