ಮೈಸೂರು : ಮೈಸೂರು ಸ್ಯಾಂಡಲ್ ಸೋಪ್‌ಗೆ ನಟಿ ತಮನ್ನಾ ಅವರನ್ನು ರಾಯಭಾರಿಯನ್ನಾಗಿ ಆಯ್ಕೆ ಮಾಡಿದ ಬಳಿಕ ಸಂಸ್ಥೆಯ ಆದಾಯ ಹೆಚ್ಚಿದೆ ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಟಿ ತಮನ್ನಾಗೆ ರಾಯಭಾರಿ ಕೊಟ್ಟಮೇಲೆ ನಮ್ಮ ಫಾಲೋವರ್ಸ್ ಕೂಡ ಹೆಚ್ಚಿದ್ದಾರೆ. ಈಗ 150 ಕೋಟಿಯಿಂದ 180 ಕೋಟಿ ಆದಾಯ ಹೆಚ್ಚಾಗಿದೆ ಎಂದ ಹೇಳಿದರು.
ಮುಂದಿನ ದಿನಗಳಲ್ಲಿ ರಾಯಭಾರಿಗಳನ್ನಾಗಿ ಹಾಲಿವುಡ್ ಸ್ಟಾರ್ ಗಳನ್ನು ಕೂಡ ಮಾಡುತ್ತೇವೆ. ಈ ವಿಚಾರದಲ್ಲಿ ಸಣ್ಣ ಮಟ್ಟದ ರಾಜಕೀಯ ಬೇಡ ಎಂದು ಹೇಳಿದರು.
ಕೆಲ ನಟಿಯರ ಹೆಸರನ್ನು ನಾನು ಹೇಳಲ್ಲ. ಅವರು ಈಗಾಗಲೇ ಬೇರೆ ಬೇರೆ ಸೋಪುಗಳಿಗೆ ರಾಯಭಾರಿ ಆಗಿದ್ದಾರೆ. ಅವರಿಂದ ಅದಕ್ಕೆ ಯಾವುದೇ ಪ್ರಯೋಜನ ಆಗ್ತಿಲ್ಲ. ಈಗಾಗಲೇ ಮೈಸೂರು ಸ್ಯಾಂಡಲ್ ಸೋಪ್ ಸೇರಿದಂತೆ ಎಲ್ಲಾ ವಸ್ತುಗಳಿಗೂ ಇ- ಕಾಮರ್ಸ್ ವ್ಯವಸ್ಥೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಲಾಭ ಬರುತ್ತದೆ ಎಂದು ಹೇಳಿದರು.





