ಮೈಸೂರು: ನಗರದ ಮಂಡಿಮೊಹಲ್ಲದಲ್ಲಿರುವ ಕೇಂದ್ರ ಕಾರಾಗೃಹದ ಕಾಂಪೌಂಡ್ ಹಿಂಭಾಗ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಅಧಿಕಾರಿಗಳನ್ನು ಕಂಡ ಆರೋಪಿಗಳು ತಮ್ಮ ಬೈಕ್‌ಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
ಅಬಕಾರಿ ಎಸ್‌ಪಿ ಪಿ. ಮಹೇಶ್ ಕುಮಾರ್ ಮಾರ್ಗದಶನದಲ್ಲಿ ಉಪ ನಿರೀಕ್ಷಕ ರವಿ ಕುಮಾರ್ ನೇತೃತ್ವದ ತಂಡದಿಂದ ದಾಳಿ ನಡೆಸಿದ್ದು, ಆರೋಪಿಗಳ ಬೈಕ್‌ಗಳನ್ನು ಸೀಸ್ ಮಾಡಲಾಗಿದೆ. ಬೈಕ್ ಮಾಲೀಕರ ಮಾಹಿತಿ ಮೇರೆಗೆ ಆರೋಪಿಗಳನ್ನು ಪತ್ತೆಹಚ್ಚುವ ಕಾರ್ಯದಲ್ಲಿ ಅಧಿಕಾರಿಗಳು ತೊಡಗಿದ್ದಾರೆ..