Mysore
24
broken clouds

Social Media

ಸೋಮವಾರ, 16 ಮಾರ್ಚ್ 2026
Light
Dark

ಮಾರ್ಚ್.12ಕ್ಕೆ ಕನ್ನಡ ಶಾಲೆಗಳ ಬಂದ್‌ಗೆ ವಾಟಾಳ್‌ ನಾಗರಾಜ್‌ ಕರೆ

vatal nagaraj

ಮೈಸೂರು: ರಾಜ್ಯ ಬಜೆಟ್‌ನಲ್ಲಿ ಕನ್ನಡ ಶಾಲೆಗಳನ್ನು ಕಡೆಗಣನೆ ಮಾಡಿದ್ದಾರೆ ಎಂದು ಆರೋಪಿಸಿ ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ಅವರು ಮಾರ್ಚ್.‌12ರಂದು ಕನ್ನಡ ಶಾಲೆಗಳನ್ನು ಬಂದ್‌ ಮಾಡುವುದಾಗಿ ಕರೆ ನೀಡಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾರ್ಚ್.‌12ರಂದು ರಾಜ್ಯಾದ್ಯಂತ ಇರುವ ಕನ್ನಡ ಶಾಲೆಗಳನ್ನು ಬಂದ್‌ ಮಾಡುತ್ತೇವೆ. ಮೈಸೂರಿನ ಜಯಚಾಮರಾಜೇಂದ್ರ ವೃತ್ತದಲ್ಲಿ ಪ್ರತಿಭಟನೆ ಮಾಡುತ್ತೇವೆ. ಇಂಗ್ಲಿಷ್‌ ಶಾಲೆಗಳಿಗೆ 3900 ಕೋಟಿ ಕೊಟ್ಟಿದ್ದೀರಿ. ಕನ್ನಡ ಶಾಲೆಗಳ ಅಭಿವೃದ್ಧಿಗೆ ನಯಾ ಪೈಸೆ ಘೋಷಣೆ ಮಾಡಿಲ್ಲ ಏಕೆ ಎಂದು ಪ್ರಶ್ನೆ ಮಾಡಿದರು.

Tags:
error: Content is protected !!