ಪ್ರಶಾಂತ್ ಎನ್ ಮಲ್ಲಿಕ್, ಮೈಸೂರು
ಮೈಸೂರು: ದೇವಸ್ಥಾನದಲ್ಲಿ ದೇವರ ಮೇಲೆ ಇರುವ ಹೂವು ಗಳನ್ನು ಕಸದ ಬುಟ್ಟಿಗೆ ಹಾಕುವುದನ್ನು ಹಾಗೂ ಇಲ್ಲವಾದರೆ ಹೊರಗಡೆ ಸುರಿಯುವುದನ್ನು ನಾವು ನೋಡಿರುತ್ತೇವೆ ಆದರೆ ಮೈಸೂರು ಜಿಲ್ಲೆಯ ಪುರಾತನ ದೇವಾಲಯದಲ್ಲಿ ದೇವರ ಮೇಲೆ ಇರುವ ಹೂವು ಗಳನ್ನು ಗಿಡಕ್ಕೆ ಹಾಕುವ ಗೊಬ್ಬರ ವಾಗಿ ತಯಾರಿಕೆ ಮಾಡುತ್ತಿದ್ದಾರೆ. ಬೇಡವಾದ ವಸ್ತುವನ್ನು ಸಹ ಉಪಯೋಗ ಬರುವ ರೀತಿಯಲ್ಲಿ ಬಳಕೆ ಮಾಡಿ ಕೊಳ್ಳುತ್ತಿದ್ದಾರೆ.
ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಪುರಾತನ ದೇವಸ್ಥಾನ ಹಾಗೂ ದಕ್ಷಿಣ ಕಾಶಿ ನಂಜುಂಡೇಶ್ವರನ ಮೂಲ ಸ್ಥಳವೆಂದೇ ಪ್ರಸಿದ್ಧಿಯನ್ನು ಪಡೆದಿರುವ ದೇವಾಲಯವಾದ ಪ್ರಸನ್ನ ನಂಜುಂಡೇಶ್ವರ ದೇವಾಲಯದಲ್ಲಿ ಬೇಡವಾದ ವಸ್ತುವನ್ನು ಸಹ ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ಪ್ರಸನ್ನ ನಂಜುಂಡೇಶ್ವರ ದೇವಾಲಯದಲ್ಲಿ ಎರಡು ವರ್ಷಗಳಿಂದ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. ಹಾಗೂ ಈ ವ್ಯವಸ್ಥೆಯನ್ನು ಐಟಿಸಿ ಕಂಪನಿಯು ಎರಡು ವರ್ಷದ ಹಿಂದೆ ಹೇಗೆ ಬಳಕೆ ಮಾಡಿಕೊಳ್ಳಬೇಕು ಎಂದು ವಿವರಣೆ ನೀಡಿ ದೇವಸ್ಥಾನಕ್ಕೆ ಎರಡು ಡ್ರಮ್ ಅನ್ನು ಅಳವಡಿಸಿದ್ದಾರೆ. ಹೇಗೆ ಗೊಬ್ಬರವಾಗಿ ತಯಾರು ಮಾಡಬೇಕು ಎಂದು ಸಹ ಚಾರ್ಟ್ ದೇವಸ್ಥಾನದ ಗೋಡೆ ಮೇಲೆ ಅಳವಡಿಕೆ ಮಾಡಿದ್ದಾರೆ.
ಚಾರ್ಟ್ ಅಲ್ಲಿ ಹಂತ ಹಂತವಾಗಿ ವಿವರಣೆ:
ಹಂತ 1. ಮೊದಲು ದೇವಾಲಯದಿಂದ ಬರುವಂತ ಕೊಳೆಯುವ ತ್ಯಾಜ್ಯವನ್ನು ಸಂಗ್ರಹಿಸಬೇಕು.
ಹಂತ 2: ನಂತರ ಸಂಗ್ರಹಿಸಿದ ತ್ಯಾಜ್ಯವನ್ನು ಗೊಬ್ಬರ ತಯಾರಿಸುವ ಕಾಂಪೋಸ್ಟರ್ ಒಳಗೆ ಹಾಕಬೇಕು.
ಹಂತ 3 : ಎಲ್ಲವನ್ನು ಹಾಕಿದ ನಂತರ ಇನಾಕ್ಯುಲಮ್ ಅಥವಾ ಹುಳಿ ಮೊಸರನ್ನು ಇದಕ್ಕೆ ಸೇರಿಸಿ ಸಮವಾಗಿ ಹರಡಬೇಕು.
1. ಈ ರೀತಿ ಪ್ರತಿಭಾರಿ ದೇವಾಲಯದಿಂದ ಬಂದ ಹೂಗಳು ಹಾಗು ಎಲೆಗಳನ್ನು ಕಾಂಪೋಸ್ಟರ್ ಒಳಗೆ ಹಾಕುವ ಮೂಲಕ ಗೊಬ್ಬರವನ್ನು ತಯಾರಿಸಬಹುದು.
2. ಹೀಗೆ ದೊರೆತಂತ ಗೊಬ್ಬರವನ್ನು ದೇವಾಲಯದ ಉದ್ಯಾನದಲ್ಲಿ ಬಳಸಬಹುದು ಮತ್ತು ಭಕ್ತಾದಿಗಳಿಗೆ ಮಾರಾಟ ಮಾಡಬಹುದು
3. ಹೂವಿನ ಹಾರದಲ್ಲಿ ಬರುವ ದಾರವನ್ನು ಬಿಡಿಸಿ ಕಾಂಪೋಸ್ಟರ್ ಒಳಗೆ ಹಾಕಬೇಕು ಹಾಗು ತ್ಯಾಜ್ಯ ಹಸಿ ಇರದಂತೆ ಮರದ ಒಟ್ಟು ಅಥವಾ ಬೂದಿಯನ್ನು ಸೇರಿಸಿ ಹಾಗೂ ಶುಚಿತ್ವ ದೈವತ್ವ ಎಂದು ವಿವರಣೆ ನೀಡಿದ್ದಾರೆ.
ಸದ್ಯ ಈ ದೇವಸ್ಥಾನದಲ್ಲಿ ಹೂಗಳನ್ನು ಗಿಡಗಳಿಗೆ ಎಲ್ಲಂದರಲ್ಲಿ ಬಿಸಾಡುತ್ತಿದ್ದರು. ಆದರೆ ಈಗ ಒಣಗಿದ ಹೂವು ಗಳನ್ನು ಡ್ರಮ್ ಗೆ ಹಾಕಿ ಅಲ್ಲಿಗೆ ಹೂವು ಮಣ್ಣು ಮರದ ಹೊಟ್ಟು ಹಾಗೂ ಬೂದಿಯನ್ನು ಹಾಕಿ ಗೊಬ್ಬರ ತಯಾರಿಸಿ ಗಿಡಗಳಿಗೆ ಹಾಕುತ್ತಿದ್ದಾರೆ. ಉಪಯೋಗವನ್ನು ಸಹ ಪಡೆದುಕೊಳ್ಳುತ್ತಿದ್ದಾರೆ.