ಮೈಸೂರು: ಮಠದಲ್ಲಿ ಸಿಕ್ಕ ಮಗುವಿನ ಸುತ್ತ ಅನುಮಾನದ ಹುತ್ತ,ಮಠದಲ್ಲಿ ಸಿಕ್ಕ ಮಗು ಯಾರದ್ದು..? ಯಾಕಾಗಿ ಬಂತು..? ಮಠದಲ್ಲಿ ಮಗು ಇರಲು ದತ್ತು ಪ್ರಕ್ರಿಯೆ ನಡೆದಿತ್ತಾ..? ಎಂದು ಮುರುಘಾ ಶ್ರೀಗಳ ಮಂಪರು ಪರೀಕ್ಷೆಗೆ ಒತ್ತಡ ಹೆಚ್ಚಿದೆ.
ಮಗು ಹಿನ್ನೆಲೆ ತಿಳಿಯಲು ಮಂಪರು ಪರೀಕ್ಷೆ ಮಾಡ್ಲೇಬೇಕು ಎಂದು ಒಡನಾಡಿ ಸಂಸ್ಥೆ ಮುಖ್ಯಸ್ಥ ಸ್ಟ್ಯಾನ್ಲಿ ಆಗ್ರಹಿಸಿದ್ದಾರೆ. ಮಠದಲ್ಲಿ ಸಿಕ್ಕ ಮಗುವಿನ ಬಗ್ಗೆ ಹಲವು ಅನುಮಾನ ಇದೆ, ಮಠದಲ್ಲಿದ್ದ ಎಲ್ಲಾ ಮಕ್ಕಳ ದತ್ತು ಪ್ರಕ್ರಿಯೆ ನಡೆದಿದೆ, ಆದ್ರೆ ಈ ನಾಲ್ಕೂವರೆ ವರ್ಷದ ಮಗುವಿಗೆ ಮಾತ್ರ ದಾಖಲೆ ಇಲ್ಲ,ಈ ಹೆಣ್ಣು ಮಗುವಿನ ದತ್ತು ಪ್ರಕ್ರಿಯೆ ಕೂಡ ನಡೆದಿಲ್ಲ, ಹೀಗಾಗಿ ಶ್ರೀಗಳ ಮಂಪರು ಪರೀಕ್ಷೆ ನಡೆದ್ರೆ ಸತ್ಯ ಹೊರಬರುತ್ತೆ ಎಂದು ಮೈಸೂರಿನಲ್ಲಿ ಒಡನಾಡಿ ಸಂಸ್ಥೆ ಮುಖ್ಯಸ್ಥ ಸ್ಟ್ಯಾನ್ಲಿ ಆಗ್ರಹಿಸಿದ್ದಾರೆ.




