ಪಿರಿಯಾಪಟ್ಟಣ: ದುಡಿಯುವ ಕೂಲಿ ಕಾರ್ಮಿಕರಿಗೆ ಕೆಲಸ ನೀಡಿ ಅವರ ಜೀವನೋಪಾಯ ಬಲಪಡಿಸಿ ನೈಸರ್ಗಿಕ ಸಂಪತ್ತನ್ನ ನಿರ್ವಹಣೆ ಮಾಡಿ ಸಾರ್ವಜನಿಕರ ಕಾಮಗಾರಿಗಳನ್ನೂ ಅನುಷ್ಠಾನಗೊಳಿಸಿ ಮೂಲಭೂತ ಸೌಕರ್ಯ ಒದಗಿಸುವುದು ಮಹಾತ್ಮ ಗಾಂಧಿ ನರೇಗಾ ಯೋಜನೆಯ ಮುಖ್ಯ ಉದ್ದೇಶ ಎಂದು ತಾಲೂಕು ಸಾಮಾಜಿಕ ಲೆಕ್ಕ ಪರಿಶೋಧನಾ ವ್ಯವಸ್ಥಾಪಕ ಯೋಗೇಶ್ ತಿಳಿಸಿದರು.
ತಾಲೂಕಿನ ಹಿಟ್ನೆ ಹೆಬ್ಬಾಗಿಲು ಗ್ರಾಮ ಪಂಚಾಯತಿ ಆವರಣದಲ್ಲಿ ಏರ್ಪಡಿಸಿದ್ದ 2023 -24 ನೇ ಸಾಲಿನ ಸಾಮಾಜಿಕ ಲೆಕ್ಕಪರಿಶೋಧನಾ ಸಭೆಯಲ್ಲಿ ಮಾತನಾಡಿ, ಮಹಾತ್ಮ ಗಾಂಧಿ ನರೇಗಾ ಯೋಜನೆ ಹಾಗೂ 15ನೇ ಹಣಕಾಸು ಯೋಜನೆ ಅಡಿ ಖರ್ಚು ವೆಚ್ಚದ ಲೆಕ್ಕವನ್ನು ಸಾರ್ವಜನಿಕರ ಮುಂದೆ ಪಾರದರ್ಶಕವಾಗಿ ಮಂಡಿಸಿ ಅನುಮೋದನೆ ಪಡೆದು ಸರ್ಕಾರಕ್ಕೆ ವರದಿ ಸಲ್ಲಿಸಬೇಕಾಗಿದೆ ಎಂದರು.
ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ತ್ರಿಪುರ, ಪಂಜಾಬ್ ಸೇರಿದಂತೆ ದೇಶದ 16 ರಾಜ್ಯಗಳಿಂದ ಕರ್ನಾಟಕ ರಾಜ್ಯಕ್ಕೆ ಸಾಮಾಜಿಕ ಪರಿಶೋಧನ ಅಧ್ಯಯನಕ್ಕೆ ಆಗಮಿಸಿದ ಅಧಿಕಾರಿಗಳ ತಂಡವನ್ನು ಪಿರಿಯಾಪಟ್ಟಣ ತಾಲೂಕು ಸಾಮಾಜಿಕ ಪರಿಶೋಧನ ವ್ಯವಸ್ಥಾಪಕ ಯೋಗೇಶ್ ಬರಮಾಡಿಕೊಂಡರು.
ಪಂಜಾಬ್ ರಾಜ್ಯದ ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯದ ನಿರ್ದೇಶಕ ಕ್ಯಾಪ್ಟನ್ ಪಿಯುಸ್ ಸಾಮಾಜಿಕ ಪರಿಶೋಧನ ಸಭೆಯನ್ನು ವೀಕ್ಷಣೆ ಮಾಡಿ ಮಾತನಾಡಿ, ಸಮುದಾಯಿತ ಆಸ್ತಿಗಳನ್ನು ನಮ್ಮದು ಎಂಬ ಭಾವನೆಯಲ್ಲಿ ನಾವೆಲ್ಲರೂ ರಕ್ಷಿಸಬೇಕಾಗುತ್ತದೆ ನಮ್ಮ ಸುತ್ತಮುತ್ತ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಸಾರ್ವಜನಿಕರು ಸರ್ಕಾರಕ್ಕೆ ತೆರಿಗೆ ಕಟ್ಟುತ್ತಾರೆ ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸುವಾಗ ವಿಳಂಬವಾಗುತ್ತದೆ ಸಾರ್ವಜನಿಕರು ಕೂಡ ತಾಳ್ಮೆಯಿಂದ ಸಹಕರಿಸಬೇಕು. ಸ್ಥಳೀಯ ಮಟ್ಟದಲ್ಲಿ ಸಾರ್ವಜನಿಕರ ಕುಂದು ಕೊರತೆಗಳನ್ನು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ತೊರಿತಗತಿಯಲ್ಲಿ ಪರಿಹರಿಸಬೇಕು ಸಮಾಜಿಕ ಪರಿಶೋಧನಾ ಸಭೆಯ ಕಾರ್ಯಕ್ರಮ ನೋಡಿ ಮೆಚ್ಚುಗೆ ಎಂದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗೇಂದ್ರ ಕುಮಾರ್. ಜಿ.ಎಸ್, ಮಾತನಾಡಿ ನರೇಗಾ ಯೋಜನೆ ಅಡಿ ಸಾರ್ವಜನಿಕರು ವೈಯಕ್ತಿಕ ಕಾಮಗಾರಿಗುಗಳನ್ನು ಮಾಡಿಕೊಳ್ಳಲು ಮೊದಲು ವಾರ್ಡ್ ಸಭೆ ಮತ್ತು ಗ್ರಾಮ ಸಭೆಗಳಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದರು
ಕರ್ನಾಟಕ ರಾಜ್ಯ ಕಾರ್ಯಕ್ರಮ ವ್ಯವಸ್ಥಾಪಕಿ ಲೋಚನ.ಬಿ, ಸಮಾಜ ಕಲ್ಯಾಣ ಇಲಾಖೆ ಅಧೀಕ್ಷಕಿ ದಮಯಂತಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಜಿ.ರವಿಕುಮಾರ್, ಉಪಾಧ್ಯಕ್ಷೆ ವನಜಾಕ್ಷಮ್ಮ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗೇಂದ್ರ ಕುಮಾರ್.ಜಿ.ಎಸ್, ಗ್ರಾಮ ಪಂಚಾಯತಿ ಸದಸ್ಯರಾದ ಕಾಮರಾಜ್, ಮಹದೇವ್, ನರೇಗಾ ತಾಂತ್ರಿಕ ಅಭಿಯಂತರ ರಕ್ಷಿತ್, ಶಿಕ್ಷಕರು, ಅಂಗನವಾಡಿ ಕಾರ್ಯಕರ್ತರು, ಸಾರ್ವಜನಿಕರು ಹಾಜರಿದ್ದರು.