Mysore
22
clear sky

Social Media

ಭಾನುವಾರ, 15 ಮಾರ್ಚ್ 2026
Light
Dark

ಮೈಸೂರಲ್ಲಿ ನಾಳೆಯಿಂದ ಮಾಗಿ ಉತ್ಸವ

ಮೈಸೂರು: ಹೊಸ ವರ್ಷಾಚರಣೆ ಹಾಗೂ ಕ್ರಿಸ್‌ಮಸ್‌ಗೆ ಮೈಸೂರು ನಗರಕ್ಕೆ ಪ್ರವಾಸಿಗರನ್ನು ಸೆಳೆಯುವ ದೃಷ್ಟಿಯಿಂದ ಅರಮನೆ ಆವರಣದಲ್ಲಿ  ಫಲಪುಷ್ಪ ಪ್ರದರ್ಶನ ಒಳಗೊಂಡ ಮಾಗಿ ಉತ್ಸವವನ್ನು ಡಿ.21 ರಿಂದ ಆಯೋಜಿಸಲಾಗಿದ್ದು, ಈ ಸಂಬಂಧ ಸಿದ್ದತೆಗಳು ಭರದಿಂದ ಸಾಗಿವೆ.

ಡಿಸೆಂಬರ್‌ 21 ರಿಂದ 31 ರವರೆಗೆ ಸುಮಾರು 11 ದಿನಗಳ ಕಾಲ ಮಾಗಿ ಉತ್ಸವ ನಡೆಯಲಿದೆ. ಇದಕ್ಕಾಗಿ ಮೈಸೂರು ಅರಮನೆ ಮಂಡಳಿ ವತಿಯಿಂದ ಸಕಲ ಸಿದ್ದತೆಗಳು ನಡೆಯುತ್ತಿದ್ದು, ಈ ಮಾಗಿ ಉತ್ಸವಕ್ಕೆ ಶಾಲಾ, ಕಾಲೇಜು ವಿದ್ಯಾರ್ಥಿಗಳು ಪ್ರವಾಸಿಗರನ್ನು ಆಕರ್ಷಿಸಲಿದೆ.

ಈ ಬಾರಿಯ ಮಾಗಿ ಉತ್ಸವದ ಫಲಪುಷ್ಪ ಪ್ರದರ್ಶನದಲ್ಲಿ ಇತ್ತೀಚೆಗೆ ಸಾವನ್ನಪ್ಪಿದ ಅರ್ಜುನ ಆನೆಯ ಆಕೃತಿ ಪ್ರಮುಖ ಆಕರ್ಷಣಿಯವಾಗಿದೆ. ಇದರ ಜೊತೆಯಲ್ಲಿ ಹಲವು ಕಲಾಕೃತಿಗಳು ಮೂಡುತ್ತಿವೆ.

ಲಕ್ಷಾಂತರ ಅಲಂಕಾರಿಕ ಹೂಗಳನ್ನು ಈ ಉತ್ಸವಕ್ಕೆ ಬಳಕೆ ಮಾಡಲಾಗುತ್ತಿದ್ದು, ಮಲೆ ಮಹದೇಶ್ವರ ಸ್ವಾಮಿ ದೇವಾಲಯ, ಸೋಮನಾಥ ದೇವಾಲಯ, ಹೊಯ್ಸಳ ದೇವಾಲಯ, ಶಿವನ ದೇವಾಲಯಗಳು ಹೂವಿನಲ್ಲಿ ಕಂಗೊಳಿಸಲಿವೆ.

ಮಾಗಿ ಉತ್ಸವದಲ್ಲಿ ಈ ಭಾರಿ ಟಿಕೆಟ್‌ ದರ ನಿಗದಿ ಮಾಡಲಾಗಿದ್ದು ವಯಸ್ಕರು, ವಿದೇಶಿಗರಿಗೆ 30 ರೂ. ನಿಗದಿ ಮಾಡಲಾಗಿದೆ. ಇನ್ನು 10 ವರ್ಷದಿಂದ 18 ವರ್ಷದೊಳಗಿನ ಮಕ್ಕಳಿಗೆ 20 ರೂ. ಹಾಗೂ 10 ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ ಎಂದು ಮೈಸೂರು ಅರಮನೆ ಮಂಡಳಿ ಆದೇಶ ಹೊರಡಿಸಿದೆ.

Tags:
error: Content is protected !!