Mysore
15
overcast clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

ಜಾತಿ ಜನಗಣತಿ | ಮುಂದಿನ ಸಭೆಯು ವಿಫಲವಾಗಲಿದೆ ; ಎಂಎಲ್‌ಸಿ ಮಂಜೇಗೌಡ (MLC Manjegowda)

ಮೈಸೂರು : ಜಾತಿ ಜನಗಣತಿ ವರದಿ ಬಗ್ಗೆ ಗುರುವಾರ (Thursday) ಸಿಎಂ ಸಿದ್ದರಾಮಯ್ಯ (CM Siddaramaiah) ನಡೆಸಿದ ವಿಶೇಷ ಸಭೆ ವಿಫಲವಾಗಿದೆ. ಹೀಗೆಯೇ ಮೇ.2 ರಂದು ನಡೆಸಲು ನಿಶ್ಚಯಿಸಿರುವ ಸಭೆಯು ಕೂಡ ಸಫಲವಾಗಲ್ಲ ಎಂದು ಎಂಎಲ್‌ಸಿ ಮಂಜೇಗೌಡ (MLC Manjegowda) ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಜನಗಣತಿ ವರದಿ ನೂರಕ್ಕೆ ನೂರರಷ್ಟು ಜಾರಿಗೆ ಬರಲ್ಲ. ವರದಿ ಅನುಷ್ಠಾನ ತರಲಿಕ್ಕೆ ಯಾರು ಹೊರಟಿದ್ದಾರೆ ಅವರಿಗೂ ಜಾರಿಗೆ ತರಲಿಕ್ಕೆ ಇಷ್ಟ ಇಲ್ಲ. ಇದೊಂದು ರೀತಿ ಮಗು ಚಿವುಟಿ ತೊಟ್ಟಿಲನ್ನೂ ತೂಗುವ ಕೆಲಸ ಎಂದು ಸಿಎಂ ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದ್ದಾರೆ.

ಹೆಚ್ಚಿನ ಮಾಹಿತಿ:- Caste Census | ವಿಶೇಷ ಸಭೆಯಲ್ಲಿ ಸಹೋದ್ಯೋಗಿಗಳಿಗೆ ಸಿ.ಎಂ ಹೇಳಿದ್ದೇನು?

ರಾಜ್ಯದಲ್ಲಿ ಒಕ್ಕಲಿಗರು, ಲಿಂಗಾಯತರು ಒಬ್ಬರ ಪರವಾಗಿಲ್ಲ. ಎಲ್ಲ ಪಕ್ಷದಲ್ಲೂ ಹೆಚ್ಚೆ ಇದ್ದಾರೆ ಎಂದು ತಿಳಿದಿರುವ ಸಿದ್ದರಾಮಯ್ಯ ಅವರು ರಾಜಕೀಯವಾಗಿ ಸಮುದಾಯವನ್ನು ಛಿದ್ರ ಮಾಡುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.

ಡಿಸೆಂಬರ್‌ಗೆ ಸಿದ್ದರಾಮಮಯ್ಯ ಕೆಳಗಿಳಿಯುತ್ತಾರೆ
ನಾನು ಸಿಎಂ ಸಿದ್ದರಾಮಯ್ಯ ಅವರನ್ನ ಹತ್ತಿರದಿಂದ ತಿಳಿದಿದ್ದೇನೆ. ಸಿದ್ದರಾಮಯ್ಯ ಬೇರೆ ರಾಜಕಾರಣಿಗಳಂತಲ್ಲ. ಜಾತಿಗಣತಿ ವರದಿ ಸಮಿತಿಯೇ ಜನರ ಕಣ್ಣೊರೆಸುವ ಸಮಿತಿಯಾಗಿದೆ. ಈ ಜಾತಿ ಜನಗಣತಿ ಜಾರಿಯೂ ಆಗಲ್ಲ, ಏನೂ ಆಗಲ್ಲ. ಡಿಸೆಂಬರ್‌ಗೆ ಸಿಎಂ ಸಿದ್ದರಾಮಯ್ಯ ಕೆಳಗಿಳಿಯುತ್ತಾರೆ.

ಇದನ್ನೂ ಓದಿ:- ಜಾತಿಗಣತಿ ವರದಿ ತಿರಸ್ಕರಿಸಿ: ಸಿಎಂ ಸಿದ್ದುಗೆ ಶೋಭಾ ಕರಂದ್ಲಾಜೆ ಪತ್ರ

ಸಮಾಜದಲ್ಲಿ ಹಿಂದುಳಿದ ಸಮುದಾಯಗಳನ್ನು ಗುರ್ತಿಸಿ ಅವರಿಗೆ ವಿಶೇಷ ಸವಲತ್ತುಗಳನ್ನು ನೀಡಿ ಮೇಲೆತ್ತುವ ಉದ್ದೇಶದಿಂದ ಜಾತಿ ಜನಗಣತಿ ಮಾಡಿಸುವುದು. ಈಗೀನ ವರದಿ ಅವಜ್ಞಾನಿಕ. ಬೇಕಾದರೆ ವೈಜ್ಞಾನಿಕ ಸಮೀಕ್ಷೆ ಮಾಡಿ ಅನುಷ್ಠಾನಕ್ಕೆ ತನ್ನಿ ಎಂದರು.

ಗ್ಯಾರಂಟಿಯಿಂದ ರಾಜ್ಯ ದಿವಾಳಿ
ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗಿದೆ. ಸರ್ಕಾರದ ಬಳಿ ಹಣ ಇಲ್ಲ. ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಮಹಿಳೆಯರಿಗೆ ಕೊಟ್ಟು ಅವಳ ಗಂಡನ ಹತ್ತಿರ ಡಬಲ್ ಕಿತ್ತುಕೊಳ್ಳುತ್ತಿದ್ದಾರೆ. ಸರ್ಕಾರ ಆರ್ಥಿಕ ನೀತಿಗಳನ್ನು ಜಾರಿಗೆ ತರುವಲ್ಲಿ ಎಡವಿದೆ ಎಂದರು.

ಇದನ್ನೂ ಓದಿ:- Caste Census Report; ಸಂಪುಟ ಸಭೆಯಲ್ಲಿ ಎಲ್ಲಾ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದ ಸಚಿವ ಎಂ.ಬಿ.ಪಾಟೀಲ್‌

ಮದ್ಯ ಬೆಲೆ ಹೆಚ್ಚು ಮಾಡಿ ಆದರೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಯಾಕೆ ಮಾಡುತ್ತೀರಿ.? ಇದೆಲ್ಲ ಡೈವರ್ಟ್ ಮಾಡುವ ಕೆಲಸ. ಒಂದು ವೇಳೆ ಮಹಾತ್ಮ ಗಾಂಧಿಜೀ ಇದ್ದಿದ್ದರೆ ಬ್ರಿಟೀಷರನ್ನ ವಾಪಸ್ ಕರೆತರುತಿದ್ದರು ಎಂದು ಪರಸ್ಪರ ರಾಜಕೀಯ ಪಕ್ಷಗಳ ಕೆಸರೆರಚಾಟಕ್ಕೆ ಎಂಎಲ್ಸಿ ಮಂಜೇಗೌಡ ಬೇಸರ ವ್ಯಕ್ತಪಡಿಸಿದರು.

Tags:
error: Content is protected !!