ಮೈಸೂರು : ರಾಜ್ಯದ ಕೆಲವು ಜಿಲ್ಲೆಗಳಲ್ಲಿಸಹಸ್ರಾರು ಜಾನುವಾರುಗಳಲ್ಲಿಕಾಣಿಸಿಕೊಂಡಿರುವ ಚರ್ಮ ಗಂಟು ರೋಗದಿಂದ ಹಾಲಿನ ಉತ್ಪಾದನೆ ಇಳಿಕೆಯಾಗುವ ಆತಂಕ ಎದುರಾಗಿದೆ.
ರಾಜ್ಯದಲ್ಲಿಸುಮಾರು 3,076 ಜಾನುವಾರುಗಳಲ್ಲಿ ರೋಗ ಪತ್ತೆಯಾಗಿದೆ. ಈ ಕಾಯಿಲೆ ಹರಡದಂತೆ ತಡೆಯಲು ಈಗಾಗಲೇ 5 ಲಕ್ಷ ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ. 25 ಲಕ್ಷ ಲಸಿಕೆ ಸಂಗ್ರಹವಿದ್ದು, ಅಕ್ಟೋಬರ್ ನವೆಂಬರ್ ತಿಂಗಳಲ್ಲಿ ಪೂರೈಸಲಾಗುವುದು. ಮೈಸೂರು ಜಿಲ್ಲೆಯ ಸರಗೂರು, ಕೆ ಆರ್ ನಗರ, ಟಿ ನರಸೀಪುರ ದಲ್ಲಿ ಮಾತ್ರ ಗಂಟು ರೋಗ ಹಸು ಇದ್ದು ಅದಕ್ಕೆ ಲಸಿಕೆಯನ್ನು ನೀಡಲಾಗಿದೆ.ಮತ್ತು ಮರಣ ಹೊಂದಿದ ಹಸುವಿಗೆ ಪರಿಹಾರಕ್ಕಾಗಿ ಸರ್ಕಾರಕ್ಕೆ ಅರ್ಜಿ ಕೂಡ ಸಲ್ಲಿಸಲಾಗಿದೆ. ಸದ್ಯದ ಪರಿಸ್ಥಿತಿಗೆ ಉಳಿದ ಯಾವುದೇ ತಾಲ್ಲೂಕಿನಲ್ಲಿ ಈ ಸಮಸ್ಯೆ ಇರುವುದಿಲ್ಲ ಎಂದು ಇಲಾಖೆಯ ಉಪ ನಿರ್ದೇಶಕ ಡಾ. ಬಿ ಎನ್ ಷಡಕ್ಷರ ಮೂರ್ತಿ ʼಆಂದೋಲನ ಪತ್ರಿಕೆಗೆʼತಿಳಿಸಿದರು.
ರೋಗ ಹರಡುವುದು ಹೇಗೆ : ಈ ವರ್ಷ ಮಳೆ ಹೆಚ್ಚಾದ ಪರಿಣಾಮ ನೊಣ, ಸೊಳ್ಳೆ ಹಾಗೂ ಉಣ್ಣೆ ಹುಳಗಳ ಉತ್ಪತ್ತಿ ಹೆಚ್ಚಾಗಿದೆ. ಇವು ಅನ್ಯ ರಾಜ್ಯಗಳಿಂದ ಹಾರಿ ಬಂದು ಈ ಕಾಯಿಲೆಯನ್ನು ಹರಡಿವೆ. ಅದೂ ಮಹಾರಾಷ್ಟ್ರ, ರಾಜಸ್ತಾನ, ಗುಜರಾತ್‌ನ ಗಡಿ ಜಿಲ್ಲೆಗಳಲ್ಲಿಈ ಕಾಯಿಲೆ ಹೆಚ್ಚು ಕಾಣಿಸಿಕೊಂಡಿದೆ ಇದರಿಂದ ಮುನ್ನೆಚ್ಚ್ರಿಕೆ ಕ್ರಮವಹಿಸಿದ್ದಲ್ಲಿ ಈ ರೋಗ ಹರಡುವುದಿಲ್ಲ
ಮೂರು ವರ್ಷಕ್ಕೊಮ್ಮೆ ಬರುವ ಗಂಟು ರೋಗ : ಒಮ್ಮೆ ಲಸಿಕೆ ಹಾಕಿದರೆ ಮೂರು ವರ್ಷದವರೆಗೆ ಚರ್ಮಗಂಟು ಕಾಯಿಲೆ ಬರದಂತೆ ತಡೆಯಬಹುದಾದ ರೋಗ ನಿರೋಧಕ ಶಕ್ತಿ ಹೊಂದಿದೆ. ಆದರೆ, ಕಾಯಿಲೆ ಬಂದ ಹಸುವಿಗೆ ಈ ಲಸಿಕೆ ಹಾಕಬಾರದು. ಏಕೆಂದರೆ ಒಂದು ಬಾರಿ ಕಾಯಿಲೆ ಬಂದರೆ ಆ ಹಸುವಿಗೆ ಮತ್ತೆ ಮೂರು ವರ್ಷಗಳ ಕಾಲ ಆ ಕಾಯಿಲೆ ಮರುಕಳುಹಿಸುವುದಿಲ್ಲ.